Tuesday, July 6, 2010
Friday, June 25, 2010
ಅವರವರ ಭಾವಕ್ಕೆ....
ಹೆಣ್ಣು : ಯಾರು ....
ಕೆಲವರಿಗೆ ಮಮತಾಮಯಿ
ಅವಳು ಮುದ್ದಿನ ತಾಯಿ
ಹಲವರಿಗೆ ಸೋದರಿ ..ಸಹೋದರಿ
ಪ್ರೀತಿ ತುಂಬಿದ ಬಾಂಧವ್ಯದ ಲಹರಿ
ಬಾಳ ಸಂಗಾತಿಯ ಸಂಪೂರ್ಣ ಪ್ರೀತಿ
ವಿವಾಹದ ನಂತರ ಸಿಗುವ ಅ ರೀತಿ..
ಆದ್ರೆ ಕಾಮ ತುಂಬಿದ ಕಣ್ಣುಗಳಿಗೆ...
ಕಾಣುವುದು ಕೇವಲ ಹೆಣ್ಣು,,,,,ಹೆಣ್ಣು ..ಹೆಣ್ಣು.......ಅಷ್ಟೇ..
ತಾಯಿ ..ತಂಗಿ ..ಅಕ್ಕ...ಹೆ೦ದತಿ
ಮಗಳು ಯಾವುದು ನೆನಪಿರಲ್ಲ.....
Tuesday, June 15, 2010
ನನ್ನ ಆಸೆ ,,,...................?
ನನ್ನ ಜಗತ್ತು ಹೀಗಿರಬೇಕು...
ನನ್ನವರೆಲ್ಲ ಹೀಗಿರಬೇಕು..
ಎಲ್ಲ ಕಡೆ ನಗು ತುಂಬಿರಬೇಕು
ಎಲ್ಲರು ನಗುತಿರಬೇಕು
ನಮ್ಮವರೆಲ್ಲ ,ಮನಸು
ಕಲ್ಮಶವಿಲ್ಲದೆ ಶುಧ್ಹವಾಗಿರಬೇಕು
ತಪ್ಪು ಒಪ್ಪುಗಳ ವಿನಿಮಯ ವಾಗಬೇಕು
ದಾರಿ ತಪ್ಪಿದರೆ ಸರಿ ಪಡಿಸಬೇಕು ..
ಧ್ವೇಷ ಮರೆತು ಪ್ರೀತಿಸುವ ಹಾಗಿರಬೇಕು
ನೋವೆನ್ನೆಲ್ಲ ಹ೦ಚಿ ಕೊಳ್ಳ ಬೇಕು
ಬೇಸರವಾದರೆ ಹೇಳಿಕೊಳ್ಳಬೇಕು
ಸಿಟ್ಟು ಬ೦ದರೆ ಕಟ್ಟಿ ಕೊಳ್ಳಬೇಕು
ಪ್ರೀತಿ ನೋವ ಮರೆಸುವಂತಿರಬೇಕು
ಭಾವನೆಗಳಿಗೆ ಬೆಲೆ ಕೊಡಬೇಕು
Wednesday, May 26, 2010
ಕರಗಿದ ಜೀವಗಳಿಗೆ ನಮ್ಮ ಭಾವ ಪೂರ್ಣ ಶ್ರದ್ದಾಂಜಲಿ..
ಕರಗಿದ ಜೀವಗಳಿಗೆ ನಮ್ಮ ಭಾವ ಪೂರ್ಣ ಶ್ರದ್ದಾಂಜಲಿ..
ಮಂಗಳೂರಿನ ವಿಮಾನ ದುರಂತ ........ಎನಿಸಿದರೆ ಸಾಕು......
ಏನಾಗಿ ಹೋಯಿತು..ಒ೦ದೇ ಒಂದು ನಿಮಿಷದಲ್ಲಿ.. ಅಷ್ಟೊಂದು ಸಂತಸದಲ್ಲಿ ಇದ್ದ ಜೀವಗಳು ..ಇನ್ನೇನು ನಾವು ಭೂಮಿ ತಾಯಿಯ ಸ್ಪರ್ಶ
ಮಾಡಲಿದ್ದೇವೆ ಎಂದು ಅನಿಸುವಷ್ಟರಲ್ಲಿ ................
ತಂದೆ ತಾಯಿಗಳ ತೆಕ್ಕೆಯಲಿ ಸೇರಬೇಕೆಂದು ಬಂದಿರುವ ಮಕ್ಕಳು, ಪ್ರಿಯತಮೆಯ ತೋಳಿನಲ್ಲಿ ಕರಗ ಬೇಕೆಂದು ಆಸೆಯಿ೦ದ
ಬಂದಿರುವ ,,,ಇನ್ನು ಕೆಲವರು, .. ರಜ ದಿನಗಳನ್ನು ಆರಾಮಾಗಿ ದೂರದ ಊರಿನಲ್ಲಿ ಕಳೆದು ತಾಯ್ನಾಡಿಗೆ ಕುಶಿಯಿಂದ ಹಿಂದಿರುಗುತ್ತಿರುವ
ಹಲವರು...ಹೀಗೆ ನಾನಾ ರೀತಿಯಲ್ಲಿ... ಅವರು ಮನದಾಳದಲ್ಲಿ ತು೦ಬಿಕೊ೦ಡು ಬಂದಿರುವ ಆಸೆ ಗಳು, ಆತ್ಮೀಯರಲ್ಲಿ ಹ೦ಚಿ ಕೊಳ್ಳಲು
ಬಾಕಿ ಇಟ್ಟಂಥ ಭಾವನೆಗಳು. ತ0ದಿರುವ೦ಥ ಉಡುಗೊರೆಗಳು,,, ಎಲ್ಲವೂ ,,,,ಬೆಂಕಿಯಲ್ಲಿ ಉರಿದು ,,,,,ಹೋದವು. ಒಂದೇ ಒಂದು
ನಿಮಿಷದ ಅ0ತರದಲ್ಲಿ..ಅವರನ್ನ ಪ್ರೀತಿಯಿಂದ ಬರ ಮಾಡಿಕೊಳ್ಳಲು ಹೋದ ಅವರ ಮನೆಯವರ ಮುಂದೆಯೇ..ನೋಡು
ನೋಡುತ್ತಿದ್ದ ..ಒಹ್..............
ದೇವರು ಒಮ್ಮೊಮ್ಮೆ ಎಷ್ಟು ಕ್ರೂರಿ ಅನಿಸುತ್ತೆ ಅಲ್ವ..... ಈ ತರ ಎಲ್ಲ ಆದಾಗ...... ಈ ಸಾವು, ನೋವು ,,,ಆಕ್ರಂದನ ...ರೋದನ ,,,,
ಎಲ್ಲ ನೋಡುವಾಗ,,,,
ನಮ್ಮ ಪರಿಚಯದ ಫ್ಯಾಮಿಲಿ ಒಂದು ಅದರಲ್ಲಿ ಇತ್ತು :
ಆದ್ರೆ ನನಗೆ ಗೊತ್ತಾಗಿದ್ದು ಸಂಡೇ ,,,ಪೇಪರ್ ನೋಡಿದಾಗ,,, ತಾಯಿ, ಮಗಳು ಮತ್ತೆ ಮಗ....
ನನ್ನ ಮಗನ ಶಾಲೆಯಲ್ಲಿ ಆ ಮಗಳು ಮತ್ತೆ ಮಗನನ್ನ ದಿನ ನೋಡುತ್ತಿದ್ದೆ..ಆ ಮಗಳು 10th ಕ್ಲಾಸಿನಲ್ಲಿ.. ... ಆ ಹುಡುಗ 3rd ನಲ್ಲಿ ಇದ್ದ..... ಒಂದು ಕ್ಷಣಕ್ಕೆ ನನಗೆ ,,,,, ಪೇಪರ್ ನೋಡಿದಾಗ ಏನು ಅರ್ಥಾನೆ ಆಗ್ಲಿಲ್ಲ.......ಆಮೇಲೆ ಶಾಲೆ ಒಬ್ಬ ಪೇರೆಂಟ್ಸ್ ಗೆ ಕಾಲ್ ಮಾಡಿ ಕೇಳಿದೆ... ಆವಾಗ ಗೊತ್ತಾಯ್ತು... ವಿಷಯ,,, ಶಾಲೆ ಮುಗಿಸಿ ರಜೆ ದಿನಗಳನ್ನ ಅವರ ತಂದೆ ಜೊತೆ ಕಳೆಯಲು ಅಮ್ಮ ,ಮಗಳು ಮತ್ತು ಮಗ ಜೊತೆಯಾಗಿ .. ದುಬೈಗೆ ಹೋಗಿದ್ರು.. .. ವಾಪಸ್ ಬರ್ಬೇಕಿದ್ರೆ ,,, ಅದೇ ವಿಮಾನದಲ್ಲಿ ಅವರಿದ್ರು......
ಶನಿವಾರ ದಿನ ನೆಟ್ನಲ್ಲಿ ಅ ದೇ ನ್ಯೂಸ್ ನೋಡಿ ನೋಡಿ ಒಂಥರ ವೈರಾಗ್ಯ ಬಂದು ಬಿಟ್ಟಿತ್ತು... ಜೀವನ ಎಂದರೆ ನೀರ ಮೇಲಿನ ಗುಳ್ಳೆ
ಅಂತ ಮನಸು ಒಪ್ಪಿಕೊಂಡು ಬಿಟ್ಟಿತ್ತು,,
ನಮ್ಮ ಪ್ರಾರ್ಥನೆ ಇಷ್ಟೇ... ಅಗಲಿದ ಆ ಅತೃಪ್ತ ಆತ್ಮಗಳಿಗೆ.... ಹೃದಯ ಪೂರ್ವಕ ಶ್ರದಾಂಜಲಿ..

"MAY YOUR SOUL REST IN PEACE"
Tuesday, May 11, 2010
ನೆನಪಿರಲಿ ,,, ನನಗೂ.ನಿಮ್ಮೆಲ್ಲರಿಗೂ ..
ನಮ್ಮ ಜೀವನ ನಮ್ಮ ಕೈಯಲ್ಲೇ ಇದೆ,, ಅದು ರೂಪಿಸೋ ಹಕ್ಕು ನಮಗೆ ಅಲ್ವ..
ಈ ಜೀವನ ಅನ್ನೋ ಹಾದಿಯಲ್ಲಿ ನಮಗೆಷ್ಟೋ ರೀತಿಯ ಅನುಭವಗಳು ಆಗುತ್ತವೆ..ಕೆಲವು ಅನುಭವಗಳು ಒಳ್ಳೆಯ ಪಾಠವನ್ನೇ ಕಲಿಸಿ ಕೊಡುತ್ತವೆ..
ವಿಭಿನ್ನ ರೀತಿಯ ಜನರ ಪರಿಚಯ .....ಕೆಲವರಲ್ಲಿ ಆತ್ಮೀಯತೆ ,,ಮತ್ತೆ ಕೆಲವರಲ್ಲಿ ಏನೋ ಸೆಳೆತ.. ಇನ್ನು ಕೆಲವರಲ್ಲಿ ಏನೋ ಶತ್ರುತ್ವ,,,
ನಮಗೆ ತಿಳಿದಿರೋ ಹಾಗೆ ಈ ಜನ್ಮದ ಪರಿಚಯ ಮಾತ್ರ ನಮಗಿರೋದು.. ಹಾಗಿರುವಾಗ ಕೆಲವರ ಪರಿಚಯ ನಮ್ಮ ಬಾಳಿನ ತಿರುವನ್ನೇ ಬದಲಿಸಿ ಬಿಡುತ್ತವೆ..
ನಮ್ಮ ಸ್ವಭಾವ ವನ್ನ ನಾವು ಅರ್ಥ ಮಾಡೋಕಾಗಲ್ಲ,,, ನಮ್ಮ ನ್ಯೂನತೆಗಳು ನಮಗೆ ಗೊತ್ತಾಗೊಲ್ಲ..
ಬೇರೆಯವರ ಬಗ್ಗೆ ನಾವು ಎಷ್ಟು ಬೇಕಾದರು ಕಾಮೆಂಟ್ಸ್ ಕೊಡ್ತೀವಿ.. ಆದ್ರೆ ನಮ್ಮ ವೀಕ್ ನೆಸ್ಸ್ ಏನಂಥ ನಮಗೆ ಗೊತ್ತಿರಲ್ಲ ...
ನಮ್ಮ ಮನಸಿನ್ನ ಭಾವನೆಗಳನ್ನ ಹಂಚಿಕೊಳ್ಳೋಕೆ ನಮಗೆ ಹಲವಾರು ಆತ್ಮೀಯರು ಇರಬಹುದು..ಆದರು ಎಲ್ಲವನ್ನ ಹ೦ಚಿ ಕೊಳ್ಳೋಕೆ ಆಗದೆ ಇರಬಹುದು.
ಆದರೆ ನೆನಪಿರಲಿ ನಾವು ನಮ್ಮ ಜೀವನದಲ್ಲಿ ಆತ್ಮೀಯರದವರನ್ನ ಮರೆತು ಬಿಡುವಂಥ ದೊಡ್ಡ ತಪ್ಪು ಯಾವತ್ತು ಮಾಡಬಾರದು... ಈ ಜನ್ಮದ ವಿಷಯವಷ್ಟೇ ನಮಗೆ ಗೊತ್ತಿರೋದು.. ಹಿ೦ದಿನ ಜನ್ಮ ..ಪುನರ್ಜನ್ಮ ,,, ಯಾವುದು ಕೂಡ ನಮಗೆ ಗೊತ್ತಿರಲ್ಲ.. .... ಆತ್ಮೀಯ ...ಮಿತ್ರರ ಬಂಧುಗಳ ಸವಿ ನೆನಪನ್ನು ,..ಪರಿಚಯವನ್ನು... ಅವರ ಮೇಲಿನ ಭಾವನೆಗಳನ್ನು ಸದಾ ಹಸಿರಾಗಿಡಿ......ಭಾ0ಧವ್ಯವನ್ನ ಮರೆತು ಬಿಡಬೇಡಿ ...ಪ್ಲೀಸ್.. ಪ್ಲೀಸ್ .,...ಪ್ಲೀಸ್...
Thursday, March 25, 2010
ಮನದಾಳದ ಹನಿ ಹನಿ
ಮನಸೊಂದು ಮರ್ಕಟ
ಅಲೆಯಬಿಟ್ಟರೆ ಅದು ಅಲೆಯುತ್ತೆ
ದಿಕ್ಕು ತಪ್ಪಿ
ಹಿಡಿತದಲ್ಲಿದರೆ ಇದು ದಿಟ
ಹೇಳಿದಾಗೆ ಕೇಳುತ್ತೆ
ಎಲ್ಲ ಒಪ್ಪಿ
============
ಯವ್ವನದ ಹೊಳೆ
ಈಜಾಟ ಬಲು ಚೆನ್ನ
ಅಲೆಗಳ ಹೊಡೆತ ಕ್ಕೆ
ಸಿಕ್ಕಿದರೆ ಎಲ್ಲ ಶೂನ್ಯ
===========
ಮಾನವೀಯತೆ ಇರಲಿ ಮನದಲಿ
ಪ್ರೀತಿ ತುಂಬಿರಲಿ ಹೃದಯದಲಿ
ಕಷ್ಟ ನಷ್ಟಗಳ ಸರಮಾಲೆ
ಎದುರಿಸುವೆ ಎಂಬ ಛಲ ಇರಲಿ
ಬಾಳಿನಲಿ
===============
Thursday, March 18, 2010
ಸೈಂಟ್.ಮ್ಯಾರಿಸ್....ಮಲ್ಪೆ...ಉಡುಪಿ
ಉಡುಪಿಗೆ ಬನ್ನಿ ಶ್ರೀ ಕೃಷ್ಣ ನ ಊರಿಗೆ..
ಮಲ್ಪೆಗೆ ಉಡುಪಿಯಿಂದ ಸುಮಾರು ೨೦ ನಿಮಿಷ,,,,, ಅಲ್ಲೇ ಇದೆ ನೋಡಿ ಒಂದು ಪುಟ್ಟ ದ್ವೀಪ ,,,,,,ಅದೇ ಸೈಂಟ್.ಮ್ಯಾರಿಸ್....
ಒಮ್ಮೆ ಹೋಗಿ ನೋಡಿ ..ಉಡುಪಿಗೆ ಶ್ರೀ ಕೃಷ್ಣನ ದರ್ಶನಕ್ಕೆ ಬಂದವರು ಇಲ್ಲಿಗೆ ಬಂದು ಹೋಗಿ..
ನಾ ಹಾಕಿದ ಈ ಫೋಟೋಸ್ ನೋಡಿಯಾದ್ರೂ ಪ್ಲೀಸ್ ಬಂದು ನೋಡಿ....
ನಿಜವಾಗಿಯೂ ನಾವು ಸಮುದ್ರದ ಮದ್ದೆ ಇದ್ದೇವೆ ಅಂತ ಅನಿಸೋದೇ ಇಲ್ಲ.. ನಿಜವಾಗಿಯೂ ನನಗೆ ಆ ಸಿಹಿ ಅನುಭವವನ್ನ , ಆನಂದವನ್ನ ಈ ಪುಟ್ಟ ಪದಗಳಲ್ಲಿ ವರ್ಣಿಸೋಕೆ ಬರಲ್ಲ.... ಈ ಫೋಟೋ ನೋಡಿಯಾದ್ರೂ ಒಮ್ಮ ಬಂದು ಹೋಗಿ ....ಪ್ಲೀಸ್ .....

ಸಮುದ್ರ್ದದ ನಡುವಿನ ಯಾನ ..ಒಹ್...
ಬಿಸಿಲಲ್ಲಿ ಸಾಕಾದರೆ .. ನಿಮಗಿದೋ ನೆರಳಿನ ಆಸರೆ..
ಸಂಗಮ,,,,,,, ದ್ವೀಪ ದ ಆ ಕಡೆ ,,, ಸಮುದ್ರದ ಈ ಕಡೆ, ನಾನೊಂದು ತೀರ ..ನೀನೊಂದು ತೀರ
ಜಲ....ನೆಲಗಳ .....ಸಮಾಗಮ........
Subscribe to:
Posts (Atom)