ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Powered By Blogger

Wednesday, July 17, 2019

ನಾನೇಕೆ ಹೀಗಾದೆ ?

ನಾನೇಕೆ ಹೀಗಾದೆ  ?
ನನ್ನೊಳಗಿನ ನಾನಾ  ಬೇರೆಯಾಗಿ ಹೋದೆ ?
ಯಾವಾಗ ಏನಾದೆ ? ಯಾಕೆ ಹೇಗೆ ಬದಲಾದೆ ?
ಎಲ್ಲಿ  ನಾ ಕಳೆದೋದೆ ಮತ್ತೆ  ಅಲ್ಲಿಗೆ ವಾಪಾಸಾದೆ 
ಮಾಡಿದ  ತಪ್ಪಿಗೆ   ನನಗಿರಲಿ ಶಿಕ್ಷೆ .. 
ಇರದೇ ಹೋಗಲಿ ಭೇದ ಭಾವ  ತುಂಬಿ ತುಳುಕಲಿ ಪ್ರೀತಿ ಜೀವ 
ನಾ ಮಾಡಿ ದ್ದೆಲ್ಲ ಸರಿ ಕೇಳೋರಿಲ್ಲ ಹೇಳೋರಿಲ್ಲ  
ವಾಸ್ತವ ಮಾತ್ರ ಬೇರೇನೇ ಮೇಲಿಂದ ಕೆಳಗೆ ಬಿದ್ದ ಹಾಗೆ  




Saturday, April 30, 2011

  
ಬಣ್ಣದ ಮಾತಿಗೆ ಮರುಳಾಗಿ


ಕಣ್ಣಿನ ಬಾಣಕ್ಕೆ ಬಲಿಯಾಗಿ 


ಪ್ರಾಣಕ್ಕಿ೦ತ ಹೆಚ್ಚಾಗಿ


ಜಗತ್ತನ್ನೇ ಗೆಲ್ಲುವೆ ಎ೦ದು ತೋರಿಸಿ


ಹೃದಯಾನ ಅಡವಿಟ್ಟು 

ಪ್ರೀತಿನ ಮಾರಿಬಿಟ್ರು ..........
********************************

ನೀನಿರದಿದ್ದರೆ ನಾನು

ನೀರಿನಿ೦ದ  ತೆಗೆದ  ಮೀನು 

ಜೊತೆಗಿದ್ದರೆ ನೀನು 

ತು೦ಬಿ ತುಳುಕುವ  ಜೇನು 



******************************************



ಕಾಮನ ಬಿಲ್ಲು ಮೂಡಲು 

ಬಿಸಿಲು ಬೇಕು ಮಳೆಯೂ ಬೇಕು


ಪ್ರೀತಿ ಇರಬೇಕಂದರೆ ಬಾಳಲಿ 

ನೋವು ಬೇಕು ನಲಿವು ಬೇಕು

ಸರಸದ ಜೊತೆಗೆ ವಿರಸವಿರಬೇಕು..


Thursday, April 28, 2011

ಹನಿ ಹನಿ....

ನೀನಿರದಿದ್ದರೆ ನಾನು
ನೀರಿನಿ೦ದ  ತೆಗೆದ  ಮೀನು 

ಜೊತೆಗಿದ್ದರೆ ನೀನು 
ತು೦ಬಿ ತುಳುಕುವ  ಜೇನು 


========================



ಕಾಮನ ಬಿಲ್ಲು ಮೂಡಲು 
ಬಿಸಿಲು ಬೇಕು ಮಳೆಯೂ ಬೇಕು

ಪ್ರೀತಿ ಇರಬೇಕಂದರೆ ಬಾಳಲಿ 
ನೋವು ಬೇಕು ನಲಿವು ಬೇಕು
ಸರಸದ ಜೊತೆಗೆ ವಿರಸವಿರಬೇಕು..


==========================

ಬದುಕಿನ ಯಾತ್ರೆ
ಗಮ್ಮತಿನ ಜಾತ್ರೆ









































Friday, June 25, 2010

ಅವರವರ ಭಾವಕ್ಕೆ....


 ಹೆಣ್ಣು :    ಯಾರು ....




ಕೆಲವರಿಗೆ  ಮಮತಾಮಯಿ 
ಅವಳು ಮುದ್ದಿನ ತಾಯಿ

 ಹಲವರಿಗೆ ಸೋದರಿ ..ಸಹೋದರಿ 
ಪ್ರೀತಿ ತುಂಬಿದ  ಬಾಂಧವ್ಯದ ಲಹರಿ

ಬಾಳ ಸಂಗಾತಿಯ ಸಂಪೂರ್ಣ ಪ್ರೀತಿ
ವಿವಾಹದ ನಂತರ ಸಿಗುವ ಅ ರೀತಿ..

ಆದ್ರೆ  ಕಾಮ ತುಂಬಿದ ಕಣ್ಣುಗಳಿಗೆ...
ಕಾಣುವುದು  ಕೇವಲ ಹೆಣ್ಣು,,,,,ಹೆಣ್ಣು  ..ಹೆಣ್ಣು.......ಅಷ್ಟೇ..

ತಾಯಿ ..ತಂಗಿ ..ಅಕ್ಕ...ಹೆ೦ದತಿ
ಮಗಳು  ಯಾವುದು ನೆನಪಿರಲ್ಲ.....

Tuesday, June 15, 2010

ನನ್ನ ಆಸೆ ,,,...................?



ನನ್ನ ಜಗತ್ತು ಹೀಗಿರಬೇಕು...
 ನನ್ನವರೆಲ್ಲ  ಹೀಗಿರಬೇಕು..

ಎಲ್ಲ ಕಡೆ ನಗು  ತುಂಬಿರಬೇಕು
ಎಲ್ಲರು ನಗುತಿರಬೇಕು
ನಮ್ಮವರೆಲ್ಲ  ,ಮನಸು
ಕಲ್ಮಶವಿಲ್ಲದೆ ಶುಧ್ಹವಾಗಿರಬೇಕು

ತಪ್ಪು ಒಪ್ಪುಗಳ ವಿನಿಮಯ ವಾಗಬೇಕು
ದಾರಿ ತಪ್ಪಿದರೆ ಸರಿ ಪಡಿಸಬೇಕು ..
ಧ್ವೇಷ ಮರೆತು ಪ್ರೀತಿಸುವ ಹಾಗಿರಬೇಕು
ನೋವೆನ್ನೆಲ್ಲ ಹ೦ಚಿ ಕೊಳ್ಳ ಬೇಕು

ಬೇಸರವಾದರೆ ಹೇಳಿಕೊಳ್ಳಬೇಕು
ಸಿಟ್ಟು ಬ೦ದರೆ ಕಟ್ಟಿ ಕೊಳ್ಳಬೇಕು
ಪ್ರೀತಿ  ನೋವ  ಮರೆಸುವಂತಿರಬೇಕು
ಭಾವನೆಗಳಿಗೆ ಬೆಲೆ ಕೊಡಬೇಕು