Thursday, March 4, 2010
ಗೆಳತಿ ....ಓ ಗೆಳತಿ ,,,,,
ನಗುವಿನ ಬೆಳದಿಂಗಳು
ತುಂಬಿದೆ ಸುತ್ತಲು
ಕತ್ತಲಲ್ಲಿ ಕುಳಿತುಕೊಂಡು
ಅಳುತ್ತಿರುವೆ ಯಾಕೆ ಗೆಳತಿ
ಹೊರಗೆ ಬಂದು ನೋಡು ಒಮ್ಮೆ
ಎಲ್ಲ ಕಡೆ ಗಿಜಿ ಗಿಜಿ
ಕಷ್ಟ ಸುಖದ ನಡುವೆ
ಓಡುತ್ತಿದೆ ಬದುಕಿನ ಗಾಡಿ
ತಲೆಯ ಮೇಲೆ ಕೈ ಬೇಡ
ಹಳೆ ನೆನಪುಗಳು ಮರೆಯಾಗಲಿ
ಮತ್ತೆ ಹೊಸ ಆಸೆ ತುಂಬಿಕೊ
ಚಿಗುರಿಸಿಕೋ ಹೃದಯ
ಚಿಮ್ಮಲಿ ಹೊಸ ಚೇತನ
ಬಾಳೊಂದು ಹೋರಾಟ
ಮರೆಯದಿರು ಗೆಳತಿ
ಬಿಡಬೇಡ ಛಲವ
ಉತ್ಸಾಹದ ಚಿಲುಮೆಯಾಗಿ
ನಗುತಿರು ಸದಾ...........
Subscribe to:
Post Comments (Atom)
ಮನಸು ನಿ೦ತ ನೀರಾಗಬಾರದು,ಹರಿವ ನದಿಯಾಗಬೇಕು, ಕಷ್ಟ ಸುಖ ಸಮನಾಗಿ ಸ್ವೀಕರಿಸುವ೦ತಿರಬೇಕು.ಅದೆ ಜೀವ ಅದುವೇ ಜೀವನ.
ReplyDeleteನಿಮ್ಮ ನಿರೂಪಣೆ ಚೆನ್ನಾಗಿದೆ.
Nice one
ReplyDeleteಚೆನ್ನಾಗಿದೆ ಬರಹ ಶೆಟ್ಟಿಯವರೇ....
ReplyDeleteಹೊಸ ಜೀವನ, ಹೊಸ ನಿರೀಕ್ಷೆಗಳು ಸದಾ ಇರಬೇಕು ಬದುಕಿನಲ್ಲಿ ಅಲ್ವೇ.... ಆಗ್ಲೇ ಲೈಫ್ ಮು೦ದೆ ಹೋಗುತ್ತಾ ಇರುವುದು....
ಯಾವಾಗ್ಲೂ "ರೈಟ್ ಪೋಯಿ" ಅ೦ತ ಹೇಳುತ್ತಿರಬೇಕು ಬದುಕು :)
ನಿಮ್ಮ ಇತರ ಬರಹಗಳನ್ನು ಓದುವ ಇರಾದೆ ಮೂಡಿದೆ... ಆದಷ್ಟು ಬೇಗ ಮುಗಿಸಬೇಕು.... ಮೂರು ಬ್ಲಾಗುಗಳನ್ನೂ ಮ್ಯಾನೇಜ್ ಮಾಡುತ್ತಿರುವುದು ನಿಜಕ್ಕೂ ಗ್ರೇಟ್...!
ನಮ್ಮದೇನಿಲ್ಲ ಸುಧೇಶ್ ಶೆಟ್ಟಿ yavare ,,
ReplyDeleteನೀವು ನಿಜವಾಗಿಯೂ ಗ್ರೇಟ್ ..ಹೆಣ್ಣಿನ ಮನಸನ್ನ ಇಷ್ಟೊಂದು ಆಳವಾಗಿ ಹೇಗೆ ಅರಿತುಕೊಂಡದ್ದು,,ಆ ಭಾವನೆಗಳು, ಆ ತೊಯ್ದಾಟ ಎಲ್ಲ ನೀವೇ ಫೀಲ್ ಮಾಡ್ಕೊಂಡು ಬರೆದಿರೋ ಹಾಗಿದೆ......
ನಾವೇನಿದ್ರೂ ಚಿಕ್ಕ ಬಿಂದು ಅಷ್ಟೇ.....ನಿಮ್ಮ ಪ್ರೋತ್ಸಾಹ ಸದಾ ನಮಗಿರಲಿ ..
ನಿಮಗೆ ನಮ್ಮ ಪ್ರೋತ್ಸಾಹದಾಯಕ ಅಭಿನಂದನೆಗಳು...
ಬೇಗ ಮುಂದುವರಿಸಿ.. ಮುಂದಿನ ಭಾಗ...ಕಾಯ್ತಾ ಇದ್ದೀನಿ..
...