ನನ್ನವರಿಗಾಗಿ ನನ್ನಿಂದ ಈ ಕರೆಯೋಲೆ ..
ಓ ನನ್ನ ಪ್ರೀತಿಯ ಹುಡುಗ
ನಿನಗೆ ಎಲ್ಲಿ ಕೇಳಿಸುತ್ತೆ ಅದು
ಭಾವನೆಗಳು ತುಂಬಿ ಬಂದು
ಹೃದಯ ದೊಳಗೆ ಭಾರವಾಗಿ
ಹೊರಗೆ ಬರಲು ಒದ್ದಾಡಿ
ಪಿಸು ಮಾತನ್ನು ಆಡುತ್ತವೆ
ಕೇಳುತ್ತಿದೆಯ
ನಿನಗೆಲ್ಲಿಯಾ ಸಮಯ
ನಿನಗೆಲ್ಲಿದೆ ತಾಳ್ಮೆ
ಪಿಸು ಮಾತು ಬಿಡು
ನನ್ನ ದಾದ ಗಟ್ಟಿ ಸ್ವರಕ್ಕು
ನಿನ್ನ ಕಿವಿ ಕಿವುಡೆ ಸರಿ
ಕಾಡಿ ಕೊಂಡೆ ದಿನ ದಿನ
ಬೇಡಿಕೊಂಡೆ ಆ ದಿನ
ಕಲ್ಲಾದ ಮನಸು ನಿನ್ನದು
ತೂತು ಮಾಡಿದರು ಕೇಳದು
ಈಗ ಈ ಹೃದಯ
ಪಿಸು ಮಾತು ಅಡುವುದನ್ನೆ ಮರೆತಿದೆ
ಮೌನವಾಗಿ ಕುಳಿತಿದೆ
ಮೋಕವಾಗಿ ಹೋಗಿದೆ.
ಹ್ಚೆ೦ದ ಭಾವದ ಕವನ.
ReplyDeleteಮೌನ ಮಾತಾಗಲಿ
ಮಾತು ಮುತ್ತಾಗಲಿ
ಜೀವನ ಉತ್ಸಾಹದ ಚಿಲುಮೆಯಾಗಲಿ
ಕಾವ್ಯ ಸಮಯ ಅಶೋತ್ತರವಾಗಲಿ.
sir ,thank you so much for ur comment..
ReplyDelete