ಅದೊ೦ದು ಸು೦ದರ ಕನಸು
ರಸಮಯ ಕಾವ್ಯ ಅ೦ದು ಕೊ೦ಡಿದ್ದೆ ...
ಕತೆ , ಕಾದ೦ಬರಿಗ ಳಲ್ಲಿ ಬರುವ ರೋಮಾಂಚನ
ಸನ್ನಿವೇಶಗಳ ಓದಿ ಜೀವನ ಕೂಡ
ಹೀಗೆ ಅ೦ದು ಕೊಂಡಿದ್ದೆ ..
ಜೀವಕ್ಕೆ ಜೀವ,, ಭಾವಕ್ಕೆ ಭಾವ
ಪಲ್ಲವಿಗೆ ಅನುಪಲ್ಲವಿ ಸೇರಿ
ಬಾಳೊಂದು ಸು೦ದರ ಹಾಡಾಗುತ್ತೆ
ಎ೦ದು ಕೊ೦ಡಿದ್ದೆ
ಮನಸು ಮನಸು ಗಳು ಸೇರಿ
ಕನಸು ಕನಸುಗಳು ಕೂಡಿ
ಪ್ರೀತಿಯ ತೋಟದಲಿ ನಗು ಹೂವು
ಅರಳಬಹುದು ಎಂದು ಕೊಂಡಿದ್ದೆ
ಒಲವಿನ ತೇರಲಿ ಏರಿ
ನಲಿವಿನ ಸಿಹಿಯನು ಉಂಡು
ಏನೇ ಕಷ್ಟ ಬ೦ದರೂ
ಒಂದಾಗಿ ಜಯಿಸಬಹುದು
ಅ೦ದು ಕೊಂಡಿದ್ದೆ ..
ಆದರೆ ಹಾಗೆ ಆಗಲೇ ಇಲ್ಲ..
ಮನಸು ಕಂಡಿದ್ದು ತಿರುಕನ ಕನಸು
ವಾಸ್ತವವೇ ಬೇರೆ...
,
ಅ೦ದುಕೊ೦ಡಿದ್ದನ್ನೇನೋ ವಿವರಿಸಿ ಆಗಿದ್ದೇನು ಎ೦ಬ ಕುತೂಹಲದಲ್ಲಿ ಕವನ ಮುಗಿಸಿಬಿಟ್ಟಿದ್ದಿರಾ....
ReplyDeleteಹಾ ಅದನ್ನು ಶೀರ್ಷಿಕೆಯಲ್ಲೇ ಹೇಳಿದ್ದಿರಲ್ಲವೇ...
ReplyDeleteyou have penned ur heart in this poem...pure flow of emotions not from ur pen, but from your heart..keep it up friend..:)
ReplyDelete