Loading...

ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Wednesday, May 26, 2010

ಕರಗಿದ ಜೀವಗಳಿಗೆ ನಮ್ಮ ಭಾವ ಪೂರ್ಣ ಶ್ರದ್ದಾಂಜಲಿ..

ಕರಗಿದ ಜೀವಗಳಿಗೆ ನಮ್ಮ ಭಾವ ಪೂರ್ಣ ಶ್ರದ್ದಾಂಜಲಿ.. 

ಮಂಗಳೂರಿನ  ವಿಮಾನ ದುರಂತ ........ಎನಿಸಿದರೆ ಸಾಕು......

ಏನಾಗಿ ಹೋಯಿತು..ಒ೦ದೇ ಒಂದು ನಿಮಿಷದಲ್ಲಿ..  ಅಷ್ಟೊಂದು ಸಂತಸದಲ್ಲಿ  ಇದ್ದ ಜೀವಗಳು ..ಇನ್ನೇನು ನಾವು ಭೂಮಿ ತಾಯಿಯ ಸ್ಪರ್ಶ

ಮಾಡಲಿದ್ದೇವೆ  ಎಂದು ಅನಿಸುವಷ್ಟರಲ್ಲಿ ................

ತಂದೆ ತಾಯಿಗಳ ತೆಕ್ಕೆಯಲಿ ಸೇರಬೇಕೆಂದು ಬಂದಿರುವ ಮಕ್ಕಳು, ಪ್ರಿಯತಮೆಯ ತೋಳಿನಲ್ಲಿ ಕರಗ ಬೇಕೆಂದು ಆಸೆಯಿ೦ದ

ಬಂದಿರುವ ,,,ಇನ್ನು ಕೆಲವರು, .. ರಜ ದಿನಗಳನ್ನು  ಆರಾಮಾಗಿ  ದೂರದ ಊರಿನಲ್ಲಿ ಕಳೆದು ತಾಯ್ನಾಡಿಗೆ ಕುಶಿಯಿಂದ ಹಿಂದಿರುಗುತ್ತಿರುವ

ಹಲವರು...ಹೀಗೆ ನಾನಾ ರೀತಿಯಲ್ಲಿ... ಅವರು ಮನದಾಳದಲ್ಲಿ  ತು೦ಬಿಕೊ೦ಡು   ಬಂದಿರುವ ಆಸೆ ಗಳು, ಆತ್ಮೀಯರಲ್ಲಿ ಹ೦ಚಿ ಕೊಳ್ಳಲು

ಬಾಕಿ ಇಟ್ಟಂಥ ಭಾವನೆಗಳು. ತ0ದಿರುವ೦ಥ  ಉಡುಗೊರೆಗಳು,,,  ಎಲ್ಲವೂ ,,,,ಬೆಂಕಿಯಲ್ಲಿ ಉರಿದು ,,,,,ಹೋದವು. ಒಂದೇ ಒಂದು

ನಿಮಿಷದ ಅ0ತರದಲ್ಲಿ..ಅವರನ್ನ ಪ್ರೀತಿಯಿಂದ  ಬರ ಮಾಡಿಕೊಳ್ಳಲು ಹೋದ ಅವರ ಮನೆಯವರ ಮುಂದೆಯೇ..ನೋಡು

ನೋಡುತ್ತಿದ್ದ  ..ಒಹ್..............

ದೇವರು ಒಮ್ಮೊಮ್ಮೆ ಎಷ್ಟು ಕ್ರೂರಿ ಅನಿಸುತ್ತೆ ಅಲ್ವ..... ಈ ತರ    ಎಲ್ಲ ಆದಾಗ......  ಈ ಸಾವು, ನೋವು ,,,ಆಕ್ರಂದನ ...ರೋದನ ,,,,

ಎಲ್ಲ ನೋಡುವಾಗ,,,,

ನಮ್ಮ ಪರಿಚಯದ ಫ್ಯಾಮಿಲಿ ಒಂದು ಅದರಲ್ಲಿ ಇತ್ತು :

ಆದ್ರೆ ನನಗೆ ಗೊತ್ತಾಗಿದ್ದು   ಸಂಡೇ ,,,ಪೇಪರ್ ನೋಡಿದಾಗ,,,  ತಾಯಿ, ಮಗಳು  ಮತ್ತೆ ಮಗ....

ನನ್ನ ಮಗನ ಶಾಲೆಯಲ್ಲಿ ಆ  ಮಗಳು ಮತ್ತೆ ಮಗನನ್ನ  ದಿನ ನೋಡುತ್ತಿದ್ದೆ..ಆ ಮಗಳು 10th  ಕ್ಲಾಸಿನಲ್ಲಿ.. ... ಆ ಹುಡುಗ   3rd  ನಲ್ಲಿ ಇದ್ದ.....  ಒಂದು ಕ್ಷಣಕ್ಕೆ ನನಗೆ ,,,,, ಪೇಪರ್ ನೋಡಿದಾಗ   ಏನು ಅರ್ಥಾನೆ   ಆಗ್ಲಿಲ್ಲ.......ಆಮೇಲೆ ಶಾಲೆ ಒಬ್ಬ ಪೇರೆಂಟ್ಸ್ ಗೆ  ಕಾಲ್ ಮಾಡಿ ಕೇಳಿದೆ... ಆವಾಗ ಗೊತ್ತಾಯ್ತು... ವಿಷಯ,,, ಶಾಲೆ ಮುಗಿಸಿ ರಜೆ ದಿನಗಳನ್ನ ಅವರ ತಂದೆ ಜೊತೆ ಕಳೆಯಲು  ಅಮ್ಮ ,ಮಗಳು ಮತ್ತು ಮಗ  ಜೊತೆಯಾಗಿ ..  ದುಬೈಗೆ ಹೋಗಿದ್ರು.. ..   ವಾಪಸ್ ಬರ್ಬೇಕಿದ್ರೆ ,,,  ಅದೇ ವಿಮಾನದಲ್ಲಿ ಅವರಿದ್ರು......


ಶನಿವಾರ ದಿನ ನೆಟ್ನಲ್ಲಿ ಅ ದೇ ನ್ಯೂಸ್ ನೋಡಿ ನೋಡಿ ಒಂಥರ ವೈರಾಗ್ಯ ಬಂದು ಬಿಟ್ಟಿತ್ತು... ಜೀವನ ಎಂದರೆ ನೀರ ಮೇಲಿನ ಗುಳ್ಳೆ

ಅಂತ ಮನಸು ಒಪ್ಪಿಕೊಂಡು ಬಿಟ್ಟಿತ್ತು,,
    
ನಮ್ಮ  ಪ್ರಾರ್ಥನೆ ಇಷ್ಟೇ... ಅಗಲಿದ ಆ ಅತೃಪ್ತ ಆತ್ಮಗಳಿಗೆ.... ಹೃದಯ ಪೂರ್ವಕ  ಶ್ರದಾಂಜಲಿ..


"MAY YOUR SOUL REST IN PEACE"

6 comments:

 1. ದುರ್ಘಟನೆಯಲ್ಲಿ ಅಗಲಿದ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾ೦ಜಲಿ. ತಮ್ಮ ನುಡಿನಮನ ನನ್ನ ಮನದ ಭಾವದ೦ತಿದೆ.

  ReplyDelete
 2. howdu ,,,sir
  thumbaane feel agtide..

  enta ondu durantha aagi hoythu anta,,,

  ReplyDelete
 3. ನಿಮ್ಮ ನುಡಿ-ನಮನ ಆತ್ಮಗಳಿಗೆ ಶಾಂತಿ ನೀಡಲಿ.

  ReplyDelete
 4. ತುಂಬಾ ತುಂಬಾ ನೋವು ತಂದ ಸುದ್ದಿ ಇದು....... ಘಟನೆ ನಡೆದ ೩೦ ಕಿಲೋ ಮೆತರ್ ದೂರ ಇದ್ದರೂ ನೋಡಲು ಹೋಗಲಿಲ್ಲ.... ಯಾಕಂದ್ರೆ, ಇಂಥಹ ಘಟನೆಗಳು ಪದೇ ಪದೇ ಮನಸ್ಸನ್ನು ಕಾಡುತ್ತಲೇ ಇರುತ್ತವೆ........... ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ......... ನನ್ನ ಬ್ಲಾಗ್ ಗೆ ಬನ್ನಿ........

  ReplyDelete
 5. ಹೌದು... ತು೦ಬಾ ಬೇಸರ ತರಿಸಿತು.... ಅದೆಷ್ಟು ಕನಸುಗಳಿದ್ದವೋ ಆ ವಿಮಾನದಲ್ಲಿ ಕೂತ ಆ ಮನಸುಗಳಲ್ಲಿ :(

  ReplyDelete
 6. ಹೌದು... ಸುಧೇಶ್ ರವರೆ..  ಕನಸಗಳು.. ಎಷ್ಟೊಂದು ಕನಸುಗಳು ಇರಬಹುದು ಅಲ್ವ.. ದೇವರು,,,, ಎಲ್ಲಾನು ಒಂದೇ ಸಲಕ್ಕೆ ಬೆಂಕಿ ಕೊಟ್ಬಿಟ್ಟ,,,

  ReplyDelete