ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Powered By Blogger

Thursday, March 25, 2010

ಮನದಾಳದ ಹನಿ ಹನಿ


ಮನಸೊಂದು ಮರ್ಕಟ
ಅಲೆಯಬಿಟ್ಟರೆ ಅದು ಅಲೆಯುತ್ತೆ
 ದಿಕ್ಕು ತಪ್ಪಿ

ಹಿಡಿತದಲ್ಲಿದರೆ ಇದು ದಿಟ
ಹೇಳಿದಾಗೆ ಕೇಳುತ್ತೆ
ಎಲ್ಲ ಒಪ್ಪಿ

============

ಯವ್ವನದ ಹೊಳೆ
ಈಜಾಟ ಬಲು ಚೆನ್ನ
ಅಲೆಗಳ  ಹೊಡೆತ ಕ್ಕೆ
ಸಿಕ್ಕಿದರೆ ಎಲ್ಲ ಶೂನ್ಯ


===========

ಮಾನವೀಯತೆ ಇರಲಿ ಮನದಲಿ
ಪ್ರೀತಿ ತುಂಬಿರಲಿ ಹೃದಯದಲಿ
ಕಷ್ಟ ನಷ್ಟಗಳ ಸರಮಾಲೆ
ಎದುರಿಸುವೆ ಎಂಬ ಛಲ ಇರಲಿ
ಬಾಳಿನಲಿ

===============

Thursday, March 18, 2010

ಸೈಂಟ್.ಮ್ಯಾರಿಸ್....ಮಲ್ಪೆ...ಉಡುಪಿ

ಉಡುಪಿಗೆ ಬನ್ನಿ ಶ್ರೀ ಕೃಷ್ಣ ನ ಊರಿಗೆ..

ಮಲ್ಪೆಗೆ  ಉಡುಪಿಯಿಂದ   ಸುಮಾರು  ೨೦ ನಿಮಿಷ,,,,,  ಅಲ್ಲೇ ಇದೆ ನೋಡಿ ಒಂದು ಪುಟ್ಟ ದ್ವೀಪ ,,,,,,ಅದೇ ಸೈಂಟ್.ಮ್ಯಾರಿಸ್....
ಒಮ್ಮೆ ಹೋಗಿ ನೋಡಿ ..ಉಡುಪಿಗೆ ಶ್ರೀ ಕೃಷ್ಣನ ದರ್ಶನಕ್ಕೆ  ಬಂದವರು ಇಲ್ಲಿಗೆ ಬಂದು ಹೋಗಿ..

ನಾ ಹಾಕಿದ ಈ ಫೋಟೋಸ್  ನೋಡಿಯಾದ್ರೂ    ಪ್ಲೀಸ್ ಬಂದು ನೋಡಿ....
ನಿಜವಾಗಿಯೂ ನಾವು ಸಮುದ್ರದ ಮದ್ದೆ ಇದ್ದೇವೆ  ಅಂತ ಅನಿಸೋದೇ ಇಲ್ಲ.. ನಿಜವಾಗಿಯೂ   ನನಗೆ ಆ ಸಿಹಿ  ಅನುಭವವನ್ನ  , ಆನಂದವನ್ನ ಈ ಪುಟ್ಟ ಪದಗಳಲ್ಲಿ ವರ್ಣಿಸೋಕೆ ಬರಲ್ಲ.... ಈ ಫೋಟೋ ನೋಡಿಯಾದ್ರೂ ಒಮ್ಮ ಬಂದು ಹೋಗಿ ....ಪ್ಲೀಸ್ .....
  

   
ಸಮುದ್ರ್ದದ ನಡುವಿನ ಯಾನ ..ಒಹ್...   

        ಬಿಸಿಲಲ್ಲಿ ಸಾಕಾದರೆ .. ನಿಮಗಿದೋ ನೆರಳಿನ ಆಸರೆ..       




ಸಂಗಮ,,,,,,,  ದ್ವೀಪ ದ ಆ ಕಡೆ ,,, ಸಮುದ್ರದ ಈ ಕಡೆ,  ನಾನೊಂದು ತೀರ ..ನೀನೊಂದು ತೀರ


ಜಲ....ನೆಲಗಳ  .....ಸಮಾಗಮ........

Thursday, March 4, 2010

ಗೆಳತಿ ....ಓ ಗೆಳತಿ ,,,,,

   
         ನಗುವಿನ ಬೆಳದಿಂಗಳು
        ತುಂಬಿದೆ ಸುತ್ತಲು
       ಕತ್ತಲಲ್ಲಿ ಕುಳಿತುಕೊಂಡು
        ಅಳುತ್ತಿರುವೆ ಯಾಕೆ ಗೆಳತಿ

          ಹೊರಗೆ ಬಂದು ನೋಡು ಒಮ್ಮೆ
          ಎಲ್ಲ ಕಡೆ ಗಿಜಿ ಗಿಜಿ
         ಕಷ್ಟ ಸುಖದ ನಡುವೆ
         ಓಡುತ್ತಿದೆ ಬದುಕಿನ ಗಾಡಿ

        ತಲೆಯ ಮೇಲೆ ಕೈ ಬೇಡ
       ಹಳೆ ನೆನಪುಗಳು ಮರೆಯಾಗಲಿ 
        ಮತ್ತೆ ಹೊಸ ಆಸೆ ತುಂಬಿಕೊ
         ಚಿಗುರಿಸಿಕೋ ಹೃದಯ
         ಚಿಮ್ಮಲಿ ಹೊಸ ಚೇತನ

          ಬಾಳೊಂದು ಹೋರಾಟ
          ಮರೆಯದಿರು ಗೆಳತಿ
          ಬಿಡಬೇಡ ಛಲವ
          ಉತ್ಸಾಹದ ಚಿಲುಮೆಯಾಗಿ
          ನಗುತಿರು ಸದಾ...........


         
         
 

        

       
 ನೀ ಇರಲು ಜೊತೆಯಲ್ಲಿ
ಸನಿಹ ಇರಲು ಮಾತು ಬಾರದು
ದೂರವಾಗಲು ಹಾಡಿನ ಸಾಲು
ರಾಗವಾಗಿ ಹಾಡುವುದು ಮನವು
ನೆನಪು ಮಾಡಲು ಬಲು ಸೊಗಸು
ಒಂದಾಗಿ ಕಳೆದ ಕ್ಷಣಗಳು



                     ಮರೀಚಿಕೆ
ನಾ ಹೋದೆ  ಅದರ ಹಿಂದೆ  ಹಿಂದೆ
ಆದರೆ ಅದು ಓಡಿತು ಮುಂದೆ ಮುಂದೆ                                                                          
ಕೈಗೆ ಸಿಕ್ಕಿತು ಅನ್ನುವಷ್ಟರಲ್ಲಿ
ದೂರ ದೂರ ಓಡುತ್ತಿತ್ತು

                     ..ಆಕೆ  ಹೆಣ್ಣು   
 ಹೆಣ್ಣಿನ ಜನನ
 ಬಲು ಭಾರ ಜೀವನ
ಬಾಲ್ಯದ ನಲಿವಿನ  ದಿನ ಮರೆತು ಬಿಡಲು
ಓಡಿ  ಬರುವುದು ಯವ್ವನ

ಕನಸುಗಳ ಕಾಣುವುದು ಮನ
ನನಸಾಗುವುದೇ ಆ ದಿನ
ಪ್ರಿಯತಮನ ತೋಳ ಬಂಧನ
ಮಾತಿಗೊ೦ದು ಚು೦ಬನ
ನಿಜವಾಗುವುದೇ ಈ ಸ್ವಪ್ನ .....