ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Powered By Blogger

Wednesday, February 24, 2010

ಈ ಸ್ನೇಹ








ಈ ಸ್ನೇಹದ ಸ್ಪರ್ಶವಾದಾಗ
ಮೊಡ ಮುಸುಕಿದ ಬಾನು

ಗಾಳಿ ಬ೦ದಾಗ ತಾನು
ತೇಲಿ ಹೋಗುವುದು

ನೋವು ತು೦ಬಿದ ಮನವು
ಪ್ರೀತಿ ಆಸರೆ ಗಾಗಿ
ಹುದುಕುತಿರುವುದು

ಕಮಲ ಅರಳುವುದು
ಸೂರ್ಯ ಬ೦ದಾಗ
ಮೊಗವು ನಗುವುದು
ನಿನ್ನ ಕ೦ಡಾಗ

ಬೇಸರ  ನೀಗಲು
ಕುಲು ಕುಲು ನಗಲು
ಭಾವನೆ ತು೦ಬಿದ
ಪ್ರೆಮದ ಹೊನಲು

ಬೇಕೆ ಬೇಕು ಬಾಳಿಗೆ
ಸ್ನೇಹದ ಮಡಿಲು
ಮಮತೆ  ತು೦ಬಿದ
ಪ್ರೀತಿಯ ಕಡಲು
ಎಲ್ಲರಿಗೂ ಸಿಗಲಿ
 ಸ್ನೇಹದ   ಆಸರೆ  ಪ್ರೀತಿ ಬಾಳಲಿ

Tuesday, February 16, 2010

ಅದೇ ಕಣ್ಣುಗಳು











ನಿನ್ನ ಆ ನೋಟ ..
ಮತ್ತೆ ಅದೇ ನೋಟ..
ಆ ನೋಟದಲಿ ಏನೋ ಹುಡುಕಾಟ..
ದಿನಾ ಇದೆ ಕಣ್ಣ ಮುಚ್ಚಾಲೆ ಆಟ.
ಕೊಡುತ್ತಿದೆ ಮನಕೆ ಬಲು ಕಾಟ
ಕಣ್ಣು ಕಣ್ಣು ಸೇರಿದಾಗ ಆಗುವ ಆ ಪೇಚಾಟ ..

ಹೃದಯದ ಬಡಿತ ಏರು ಪೇರು
ಮನದ ಮಿಡಿತ ತುಡಿತ ಕ್ಕೆ ಕಾರಣ ಯಾರು
ಅದೇ ಕಣ್ಣುಗಳು ..

ಮಾತಿಲ್ಲ ಮೌನ ,,
ಹಾಡುತಿದೆ ಸು೦ದರ ಗಾನ
ಸಮಯ ದ ಪರಿವೆಯಿಲ್ಲ
ನೋಟದೊಳು ನೋಟ
ಕೂಡಿ ಆಡುವಾಗ ಆಟ..
ಭೂ ಕಂಪವಾದರು ಚಿಂತಿಲ್ಲ
ಕಾರಣ ಅದೇ ಕಣ್ಣು ಗಳು..

Monday, February 15, 2010

ಕನಸು ನನಸಾಗಲಿಲ್ಲ ...!






ಅದೊ೦ದು ಸು೦ದರ ಕನಸು
 ರಸಮಯ ಕಾವ್ಯ ಅ೦ದು ಕೊ೦ಡಿದ್ದೆ ...
ಕತೆ , ಕಾದ೦ಬರಿಗ ಳಲ್ಲಿ ಬರುವ ರೋಮಾಂಚನ 
ಸನ್ನಿವೇಶಗಳ ಓದಿ ಜೀವನ ಕೂಡ 
ಹೀಗೆ ಅ೦ದು ಕೊಂಡಿದ್ದೆ ..

ಜೀವಕ್ಕೆ ಜೀವ,, ಭಾವಕ್ಕೆ ಭಾವ
ಪಲ್ಲವಿಗೆ ಅನುಪಲ್ಲವಿ ಸೇರಿ
ಬಾಳೊಂದು ಸು೦ದರ ಹಾಡಾಗುತ್ತೆ
ಎ೦ದು ಕೊ೦ಡಿದ್ದೆ


ಮನಸು ಮನಸು ಗಳು ಸೇರಿ
ಕನಸು ಕನಸುಗಳು ಕೂಡಿ
ಪ್ರೀತಿಯ ತೋಟದಲಿ ನಗು ಹೂವು
ಅರಳಬಹುದು ಎಂದು ಕೊಂಡಿದ್ದೆ

ಒಲವಿನ  ತೇರಲಿ  ಏರಿ
ನಲಿವಿನ ಸಿಹಿಯನು ಉಂಡು
ಏನೇ ಕಷ್ಟ ಬ೦ದರೂ
ಒಂದಾಗಿ ಜಯಿಸಬಹುದು
ಅ೦ದು ಕೊಂಡಿದ್ದೆ ..

ಆದರೆ ಹಾಗೆ ಆಗಲೇ ಇಲ್ಲ..
ಮನಸು ಕಂಡಿದ್ದು ತಿರುಕನ ಕನಸು
ವಾಸ್ತವವೇ ಬೇರೆ... 










,


















Tuesday, February 9, 2010

ನನ್ನ ಪ್ರೀತಿಯ ಬಾಲ್ಯವೇ.. ಮತ್ತೊಮ್ಮೆ ಮರಳಿ ಬಾ









ಆ ದಿನಗಳು ..ಅದೇ ಬಾಲ್ಯದ ದಿನಗಳು..ಎಷ್ಟು ಚೆನ್ನಾಗಿತ್ತು. ಮಾತ್ರ ಅದು ಈಗ ನವಿ ನೆನಪು ಮಾತ್ರ...
ಆಗ ಮನಸ್ಸು ಕೂಡ ಎಷ್ಟು ಮುಗ್ಧವಾಗಿರುತ್ತೆ  ಅಲ್ವ...ಏನು ಗೊತ್ತೇ ಇರುವುದಿಲ್ಲ..
ಕಷ್ಟ ನೋ  ಸುಖ ನೋ , ಪ್ರೀತಿ ಅಥವಾ ದ್ವೇಷ  ..ಇದರ  ಅರ್ಥವೇ ಗೊತ್ತಿರದಷ್ಟು ಮುದ್ದಾಗಿತ್ತು ಆ ಬಾಲ್ಯ...
ಸಿಟ್ಟು ಬಂದರೆ ಕೋಪ ಹಾಕುವುಧು ಒಂದೇ ಗೊತ್ತಿದ್ದದ್ದು..

ಮನೆಯಲ್ಲಿ  ಆಡುತಿದ್ದ ಆ ಕಣ್ಣು ಮುಚ್ಚಾಲೆ ಆಟ, ಜೂಟಾಟ ಏನು ಚಂದ ಇತ್ತು...ಬೇಸಿಗೆ ರಜಾ ದಿನದಲ್ಲಿ ಮಾವಿನ ಮರದ ಹಣ್ಣು ಹೆಕ್ಕಲು  ಪೈಪೋಟಿ .ಗೆಳೆಯ ,ಗೆಳತಿಯರ ಜೊತೆಗಿನ ಆ ದಿನ ...ಮತ್ತೆ ಮತ್ತೆ ನೆನಪು ಬರುತಿದೆ...

ನನಗೆ ಇನ್ನು ನೆನಪಿದೆ ಆ ಹಾಸ್ಯ ಪ್ರಸಂಗ...
ಶಾಲೆಗೆ ಹೋಗುವಾಗ ಬರುವಾಗ ನಮ್ಮದೇ  ಒಂದು ದೊಡ್ಡ ಗುಂಪು....ಒಟ್ಟು ಎಂಟು ಜನ ಹುಡುಗಿಯರು ಆರು ಜನ ಹುಡುಗರು.. ಮನೆಯಿಂದ ಸುಮಾರು ಮುಕ್ಕಾಲು ಗಂಟೆ  ದಾರಿ ಶಾಲೆಗೆ... ಹೋಗುವಾಗ ಸಾಕಿತ್ತು ...
ಆದರೆ ದಾರಿಯ ಮಧ್ಯೆ  ಒಂದು ದೊಡ್ಡ ಗದ್ದೆ ..ಅದೂ ಕಬ್ಬಿನ  ಗದ್ದೆ... ಗದ್ದೆಯಲ್ಲಿ ಹೋಗಲಿಕ್ಕೆ  ಇಲ್ಲ ಗದ್ದೆ ನಡುವೆ ಒಂದು  ದಾರಿ ಮಾಡಿದ್ರು.. ಅದರಲ್ಲಿ ನಮ್ಮ ದಿನ ನಿತ್ಯದ ಪಯಣ ..
ಹೀಗಿರಬೇಕಾದ್ರೆ ಗದ್ದೆಯಲ್ಲಿನ ಕಬ್ಬು  ಬೆಳೀತಾ ಬಂತು..ನಮಗೆಲ್ಲ ಅದರ ಮೇಲೆ ಕಣ್ಣು .. ಆ ಕಬ್ಬಿನ  ಒಡೆಯರ ಮನೆ ಗದ್ದೆಗಿ೦ತ ಸ್ವಲ್ಪ   ದೂರ ಇತ್ತು..ನಮೆಗೆಲ್ಲ ಆ ಕಬ್ಬಿನ ಮೇಲೆ ಕಣ್ಣು,,  ನಮ್ಮೆ ಗೆಳೆಯರು ಓ೦ದು  ದಿನ ಗಟ್ಟಿ ಮನಸು ಮಾಡಿಯೇ ಬಿಟ್ಟರು..ಶಾಲೆ ಬಿಟ್ಟು ಹಿ೦ದೆ ಬರುವಾಗ ಮೆಲ್ಲನೆ ಆ ಗದ್ದೆಯ ಒಳಗೆ ತೂರಿಕೊಂಡು  ಕಬ್ಬನ್ನು ಮೆಲ್ಲಗೆ ತು೦ಡು ಮಾಡಿ ತರಲು ಶುರು ಮಾಡಿದರು ..ದಿನಾ ಇದೇ ತರ  ಮುಂದುವರಿಯುತ್ತಿತ್ತು..ಕಬ್ಬನ್ನು ತಿ೦ದು ರಸವನ್ನ ಹೀರಿ ..ದಾರಿ ಸವೆಸುವ ಆ ಪರಿ ಗಮ್ಮತ್ತೆ ಗಮ್ಮತ್ತು..

ಆದರೆ ಒಂದು ದಿನ ಮಾತ್ರ ಆ ಗದ್ದೆಯ ಒಡೆಯರ ಕೈಯಲ್ಲಿ ಸಿಕ್ಕಿ ಬೀಳುವ ಪಜೀತಿ ನಮ್ಮ ಗೆಳೆಯರದಾಯಿತು...ಗದ್ದೆಯ ನಡು ಭಾಗ ಖಾಲಿ ಖಾಲಿ ಯಾದಾಗ ಅವರಿಗೆ ಹೇಗೆ ಅನಿಸಿರಬಹುದು...ಅಯ್ಯೋ ಪಾಪ..ನಾವು ಬರುವ ಹೊತ್ತಲ್ಲಿ ಕಾದು ಕೂತಿದ್ದರು ಅನಿಸುತ್ತೆ,,,ನಮಗೆ ನಮ್ಮ ಗೆಳೆಯರಿಗೆ ಅದರ ಪರಿವೆ ಇರಲಿಲ್ಲ..ಅವರು ದಿನ ನಿತ್ಯದಂತೆ  ಗದ್ದೆಯ ಒಳಗೆ ತೋರಿ ಕಬ್ಬು ತು೦ಡು ಮಾಡಲು ಸುರು ಮಾಡುತ್ತಿದ್ದಂತೆ ಈ ಕಡೆಯಿ೦ದ ಬೆನ್ನಿಗೆ ಬೀಳಲು ಸುರುವಾಗಿತ್ತು..ನಾವೆಲ್ಲ ಹೆದರಿ ಚೆಲ್ಲಾಪಿಲ್ಲಿ.. ಕಬ್ಬಿನ ರುಚಿಯೊ೦ದಿಗೆ ಪೆಟ್ಟಿನ ರುಚಿಯು ಸೇರಿ ಒಳ್ಳೆಯ ಕಬ್ಬಿನ ಪಾನಕ ಕುಡಿದ ಹಾಗಿತ್ತು..ಮತ್ತೆ  ಒಂದು ವಾರ ನಮ ದಾರಿಯೇ ಬದಲಾಯಿತು... ಆದರೂ ಆ ನೆನಪು ಮಾತ್ರ ಕಬ್ಬಿನ ರಸದಂತೆ ಇನು ಸಿಹಿಯಾಗಿಯೇ ಉಳಿದಿದೆ..
                      ಇನ್ನೊ೦ದು ಕ್ಲಾಸಿನಲ್ಲಿ ನಡೆದ ಹಾಸ್ಯ ಪ್ರಸ೦ಗ.  ಎಂಟನೆ ಕ್ಲಾಸಿನಲ್ಲಿ ಇರಬೇಕಾದ್ರೆ ..ಬೆಳಗ್ಗಿನ ನಾಲ್ಕನೇ ಪೀರಿಯಡ್ ಫ್ರೀ ಇತ್ತು.   ನಾವು ನಾಕು ಜನ ಗೆಳತಿಯರು ಊಟ ಮುಗಿಸಿ ಏನು ಮಾಡುವುದು  ಎ೦ದು ಯೋಚಿಸುತ್ತಿರಬೇಕಾದರೆ ಒಬ್ಬಳು ಹಾಡು ಹೇಳೋಣಾ ಎ೦ದ ಳು . ಕ್ಲಾಸಿನಲ್ಲಿ ನಮ್ಮನ್ನು ಬಿಟ್ಟರೆ ಉಳಿದವರೆಲರು ಲೈಬ್ರರಿ ಗೆ  , ಅಲ್ಲ್ಲಿಗೆ  ಇಲ್ಲಿಗೆ ಅಂತ ಹೊರಗೆ ಹೋಗಿದ್ದರು.. ಸುರುವಾಯಿತು ನಮ್ಮ ಹಾಡಿನ ಸರಮಾಲೆ..
ಆ ಕಡೆಯಿಂದ ಈ     ಕಡೆಯಿಂದ ಬೇರೆ ಕ್ಲಾಸ್ ನಡೆಯೋ ದನ್ನ ಮರೆತು ನಮ್ಮ ಸ್ವರ ಜೋರಾಗಿ ತಾರಕಕ್ಕೆ ಏರಿತ್ತು,, 

ಆಛೆ ಕ್ಲಾಸಿನ ಸರ್ ಕೈಯಲಿ ಬೆತ್ತ ಹಿಡಿಧು ನಮ್ಮ ಕ್ಲಾಸಿಗೆ ಬ೦ದಾಗಲೆ ನಮ್ಮ ಸ್ವಾ ಅಲ್ಲೇ ಗುಂ.   ನನ್ನ ಸವರಣೆ ಜಾಸ್ತಿ ಪಿಚ್ನಲ್ಲಿ ಇತ್ತು ..ಅದನ್ನೇ ನೆಪ ಮಾಡಿಕೊಂಡು ನನ್ನನ್ನ ಮಾತ್ರ ಅವರ ಕ್ಲಾಸಿಗೆ ಕರೆದು ಕೊ೦ಡು ಹೋಗಿ ಒಂದು ಹಾಡು ಹಾಡಲಿಕ್ಕೆ ಹೇಳಿದ್ರು... ನಾ ಎಷ್ಟು ಒಲ್ಲೆನೆ೦ದರೂ  ಬಿಡದೆ ಬೆತ್ತ ತೋರಿಸಿ ಮತ್ತೆ ಮತ್ತೆ ಒತ್ತಾಯ ಮಾಡಿ ಹಾಡಿಸಿಯೇ ಬಿಟ್ಟರು..  ನನಗೆ ಮಾತ್ರ ಆ ಹಾಡು , ಆ ಪ್ರಸ೦ಗ ಇನ್ನು ಹಾಗೆ ಹಸಿರಾಗಿ ಮನದಲ್ಲಿಯೇ ಉಳಿದು ಬಿಟ್ಟಿದೆ.........ನನ್ನ ಹೆಸರನ್ನು ಯಸ್..ಜಾನಕಿ ಅ೦ತ ನಾಮಕರಣ ಮಾಡಿಬಿಟ್ರು..ಇಂದಿಗೂ ಆ ಸರ್  ಎಲ್ಲಾದರು ಸಿಕ್ಕಿದೆ ನನ್ನ ಕರೆಯೋದು ಅದೇ ಹೆಸರಿ೦ದ..



ಇನ್ನು ಎಷ್ಟೋ  ಪ್ರಸ೦ಗ ಗಳು  ಇವೆ ಮರೆಯಲಾಗದು.... ಹೇಳಲಾಗದ್ದು .

ಆ ಬಾಲ್ಯದ ಸಿಹಿ ನೆನಪು ಮತ್ತೆ ಮತ್ತೆ ಬರುತ್ತಾ ಮುದುಡಿದ ಈ ಮನವನ್ನ  ಅರಳಿಸುತ್ತಲೇ ಇರುತ್ತದೆ............ಓ ಬಾಲ್ಯವೇ ಮತ್ತೊಮ್ಮೆ ಬಾ ಮರಳಿ...           ಕಾದಿರುವೆ ನಿನಗಾಗಿ ................

Thursday, February 4, 2010

ಸವಿ ನೆನಪು



ನಿನ್ನ  ನೆನಪಾದರೆ
 ಸಾಕು
ಮನ ಮೂಕವಾಗುವುಧು
ಕಣ್ಣು  ತುಂಬಿ ಬರುವುಧು
ಹೃದಯ ಭಾರವಾಗುವುಧು

             ನೀನೇಕೆ ನನ್ನಿಂದ ದೂರವಾದೆ
             ನೀನೇಕೆ ನನ್ನಿಂದ ಮರೆಯಾದೆ
             ನೀನೇಕೆ ನನ್ನಿಂದ ಬೇರೆಯಾದೆ

ಜೊತೆಯಾಗಿ ಬೆರೆಯುತಿದ್ದ
ಆ ದಿನಗಳು
ಒಂದಾಗಿ ಪ್ರೇಮ ಗೀತೆ ಹಾಡುತಿದ್ದ
ಆ ಕ್ಷಣಗಳು
ಹಕ್ಕಿಯಾಗಿ ಹಾರುತಿದ್ದ
ಆ ಜೋಡಿ  ರೆಕ್ಕೆಗಳು


          ಎಲ್ಲವೂ ಸೇರಿ
        ಈಗ ಕಹಿಯಾಗಿ
        ನನ್ನ ಸುತ್ತ ಮುತ್ತ  ಸುತ್ತಿ
        ನನ್ನನ್ನ ಬೆನ್ನು ಹತ್ತಿ
         ಕೊಲ್ಲುತ್ತಿವೆ  ..

ಹೃದಯ ದೊಳಗಿನ ಪಿಸು ಮಾತು .




ನನ್ನವರಿಗಾಗಿ ನನ್ನಿಂದ ಈ ಕರೆಯೋಲೆ ..
ಓ ನನ್ನ ಪ್ರೀತಿಯ ಹುಡುಗ
ನಿನಗೆ ಎಲ್ಲಿ ಕೇಳಿಸುತ್ತೆ ಅದು

ಭಾವನೆಗಳು ತುಂಬಿ ಬಂದು
ಹೃದಯ ದೊಳಗೆ ಭಾರವಾಗಿ
ಹೊರಗೆ ಬರಲು ಒದ್ದಾಡಿ
ಪಿಸು ಮಾತನ್ನು ಆಡುತ್ತವೆ
ಕೇಳುತ್ತಿದೆಯ 

ನಿನಗೆಲ್ಲಿಯಾ ಸಮಯ
ನಿನಗೆಲ್ಲಿದೆ ತಾಳ್ಮೆ
ಪಿಸು ಮಾತು ಬಿಡು
ನನ್ನ ದಾದ ಗಟ್ಟಿ ಸ್ವರಕ್ಕು
ನಿನ್ನ ಕಿವಿ ಕಿವುಡೆ ಸರಿ

ಕಾಡಿ ಕೊಂಡೆ  ದಿನ ದಿನ
ಬೇಡಿಕೊಂಡೆ ಆ ದಿನ
ಕಲ್ಲಾದ ಮನಸು ನಿನ್ನದು
ತೂತು ಮಾಡಿದರು ಕೇಳದು

ಈಗ ಈ ಹೃದಯ
ಪಿಸು ಮಾತು ಅಡುವುದನ್ನೆ ಮರೆತಿದೆ
ಮೌನವಾಗಿ  ಕುಳಿತಿದೆ
ಮೋಕವಾಗಿ ಹೋಗಿದೆ.





















Monday, February 1, 2010

ಬಸ್ ಬ೦ತು ಬಸ್








ಬಸ್ ಬ೦ತು ಬಸ್

ಈ ಬಸ್ಸಿನಲ್ಲಿ   ಅದೂ ರಶ್ ನಲ್ಲಿ

ನಿಂತವರು ಸರ್ಕಸ್ ಮಾಡ್ತಾರೆ

ಡ್ರೈವರ್ ಬ್ರೇಕ್ ಹಾಕಿದಾಗ

ಹಿಂದೆ ಮುಂದೇ ಓಡುತ್ತಾರೆ

                     ಆದ್ರೆ ಕೆಲವರು ಕುಳಿತಲ್ಲಿಯೇ
                                   
                         ಹತ್ತಿರದವರನ್ನು ಆಡಿಸ್ತಾರೆ
               
                                 ಕಾಡಿಸ್ತಾರೆ  ಪೀಡಿಸ್ತಾರೆ



ಕೆಲವರಿಗೆ ಅನುಭವ ಹೊಸತು
                     ಹಲವರಿಗೆ ಬಿಸಿ ತುಪ್ಪ
ಎದುರಿಸಲು ಸಂಕೋಚ
                                    ಬೆದರಿಸಲು ಭಯ

ಒಮ್ಮೊಮ್ಮೆ ಒಂದು ಥರ




ಯಾಕೋ ಏನೋ ಗೊತ್ತಿಲ್ಲ ..ಒಮ್ಮೊಮ್ಮೆ ಜಗತ್ತಿನ ಎಲ್ಲ ಸಂತಸ ..ನಗು ..ಉಲ್ಲಾಸ ಎಲ್ಲ ನನ್ನಲ್ಲಿಯೇ ಇದೆ ಅನಿಸುತ್ತೆ...

ಆದರೆ ಮತ್ತೊಮ್ಮೆ ಎಲ್ಲ ಖಾಲಿ ಖಾಲಿ ...ಶೂನ್ಯವಾಗಿ ಬಿಡುತ್ತೆ,,
ನಾನು ಯಾಕೆ ಹೀಗಾದೆ .ನನಗೆ ಗೊತ್ತಿಲ್ಲ ..ಅಲ್ಲ ನಾನು ಹೀಗೆ ಇರಲ್ಲಿಲ್ಲ..ಆದರು ಯಾಕೆ ಹೀಗಾದೆ ?



ಮೊದಲು ನಾನು ಹೇಳಿದ್ದೆಲ್ಲ ನನಗೆ ಸಿಗಬೇಕು.ಹಾಗಿದ್ದೆ .. ಆದರೆ ಈಗ .... ಮನದಲ್ಲಿನ ಭಾವನೆಗಳನ್ನು ವ್ಯಕ್ತ ಪಡಿಸಲು ಸ್ವಾತಂತ್ರ ಇಲ್ಲದಷ್ಟು ಸ್ಥಿತಿಗೆ ಬಂದಿದ್ದೇನೆ ಅ೦ದ್ರೆ ಇದು ಯಾರ ತಪ್ಪು...


ಈಗಲೂ ಮೆಲುಕು ಹಾಕುತ್ತೇನೆ ಆ ದಿನಗಳನ್ನ .. ಹಕ್ಕಿಯಂತೆ ಹಾರುತಿದ್ದ ಆ ಕ್ಷಣಗಳನ್ನ .....ಆದರೆ ಈಗ ಈ ಬಂಧನ ..


ಕಷ್ಟ ಅ೦ದರೆ ಏನು ಅಂತ ಗೊತ್ತಿಲ್ಲ.. ಬೇಸರ ಅನ್ನೋದು ಇಲ್ಲವೇ ಇಲ್ಲ... ಸದಾ ಖುಷಿಯಾಗಿ , ನಗು ನಗುತ್ತ ಇದ್ದ ಆ ದಿನಗಳು ಮತ್ತೆ ಖಂಡಿತ ಬರುವುದಿಲ್ಲ ಎಂಬ ಸತ್ಯ ಗೊತ್ತಿದ್ದರೂ ಅದನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಂಡು ಕುಶಿ ಪಡುವ ಸಿಹಿ ನೆನಪು ಎಷ್ಟು ಚಂದ ಅಲ್ವ...ಆ ನೆನಪೇ ತಂಪಾದ ಗಾಳಿಯಾಗಿ ...ಇಂಪಾದ ಹಾಡಾಗಿ ...ನನ್ನ ಮನದಲ್ಲಿ ಆಗಾಗ ಮೂಡಿ ಮರೆಯಾಗಿ ನೋವನ್ನ ಒಮ್ಮೊಮ್ಮೆ


ಇನ್ನೊಮ್ಮೆ ನಲಿವನ್ನ ಮನಸಿನ್ನ ಜೊತೆ ಆಡಿ ಆಡಿ ಓಡಿ ಹೋಗುತ್ತೆ .........


ಯಾವಾಗಲು ಎನಿಸೋದು ..ಇನ್ನು ಗಟ್ಟಿ ಮನಸು ಮಾಡ್ಕೊಂಡು ಇರ್ಬೇಕು  ಅಂತ ,,,ಆದ್ರೆ ಸಣ್ಣ ಪುಟ್ಟ ವಿಷಯಕ್ಕೆಲ್ಲ ಮತ್ತೆ ನೊಂದು ಕೊಳ್ಳೋದು ..ಇದೆ ಆಯಿತು,,

ಈ ಮನಸು ತುಂಬಾನೆ ವೀಕ್ ಕಣ್ರೀ...ಏನು ದಮ್ಮೆ ಇಲ್ಲ..

ಕೆಲವರು ಎಷ್ಟು ಕಡಕ್ ಇರ್ತಾರಲ್ವ..   ನಿಜವಾಗಿಯೂ ಅವರು ಗ್ರೇಟ್ ,,,,,

ನಾನು ಮಾತ್ರ ಎಷ್ಟು ಪ್ರಯತ್ನ ಪಟ್ರೂ ಯಾಕೆ ಆಗಲ್ಲ ..

ಈ ಪ್ರಪ೦ಚದಲ್ಲಿ  ಮೆ೦ಟಲಿ ಸ್ತ್ರಾ೦ಗ್ ಆಗಿ ಇದ್ರೆ ಮಾತ್ರ ನಾವು ಇರೋಕಾಗೋದು.. ಈ ಸೆ೦ಟಿಮೆ೦ಟಲ್ ಮನಸನ್ನ ಇಟ್ಕೊ೦ಡ್ರೆ ಕಷ್ಟ ಬಾರಿ ಕಷ್ಟ ..

ಬೇಸರ ಆದಾಗ ಅತೀಯಾಗಿ  ಬೇಸರ ಪಡೋದು ,  ಕುಶಿಯಾದಾಗ ತುಂಬಾ ಕುಶೀ ಪಡೋದು , ಕಷ್ಟ ಬಂದಾಗ  ಆಕಾಶನೆ ತಲೆ ಮೇಲೆ ಬಿದ್ದ ಹಾಗೆ ಮಾಡೋದು...ಎಲ್ಲ ಬಿಟ್ಟು ಬಿಡಬೇಕು..  ಕಷ್ಟ ಮನುಷ್ಯನಿಗೆ ಬರದೆ ಮತ್ತೆ ಮರಕ್ಕ ಬರೋದು..

ಸಮರಸವೇ ಜೀವನ..........ಕಷ್ಟ ಸುಖ ಎರಡನ್ನು  ಸಮವಾಗಿ ಹ೦ಚಿಕೊ೦ಡು ಬದುಕನ್ನ ಹಸನಾಗಿಸುವ ಪ್ರಯತ್ನ ನನ್ನದು .ಮನಸ್ಸು
ಹಸಿರಾಗಿರಬೇಕು.. ಆಗಲೇ ನಾವು ಕುಶಿಯಾಗಿರೋಲೆ ಸಾದ್ಯ,,,

ನಿಮ್ಮ ಅನಿಸಿಕೆ ಏನು ಹೇಳ್ತೀರಾ ,,,,,,ಪ್ಲೀಸ್ ...