ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Powered By Blogger

Thursday, March 18, 2010

ಸೈಂಟ್.ಮ್ಯಾರಿಸ್....ಮಲ್ಪೆ...ಉಡುಪಿ

ಉಡುಪಿಗೆ ಬನ್ನಿ ಶ್ರೀ ಕೃಷ್ಣ ನ ಊರಿಗೆ..

ಮಲ್ಪೆಗೆ  ಉಡುಪಿಯಿಂದ   ಸುಮಾರು  ೨೦ ನಿಮಿಷ,,,,,  ಅಲ್ಲೇ ಇದೆ ನೋಡಿ ಒಂದು ಪುಟ್ಟ ದ್ವೀಪ ,,,,,,ಅದೇ ಸೈಂಟ್.ಮ್ಯಾರಿಸ್....
ಒಮ್ಮೆ ಹೋಗಿ ನೋಡಿ ..ಉಡುಪಿಗೆ ಶ್ರೀ ಕೃಷ್ಣನ ದರ್ಶನಕ್ಕೆ  ಬಂದವರು ಇಲ್ಲಿಗೆ ಬಂದು ಹೋಗಿ..

ನಾ ಹಾಕಿದ ಈ ಫೋಟೋಸ್  ನೋಡಿಯಾದ್ರೂ    ಪ್ಲೀಸ್ ಬಂದು ನೋಡಿ....
ನಿಜವಾಗಿಯೂ ನಾವು ಸಮುದ್ರದ ಮದ್ದೆ ಇದ್ದೇವೆ  ಅಂತ ಅನಿಸೋದೇ ಇಲ್ಲ.. ನಿಜವಾಗಿಯೂ   ನನಗೆ ಆ ಸಿಹಿ  ಅನುಭವವನ್ನ  , ಆನಂದವನ್ನ ಈ ಪುಟ್ಟ ಪದಗಳಲ್ಲಿ ವರ್ಣಿಸೋಕೆ ಬರಲ್ಲ.... ಈ ಫೋಟೋ ನೋಡಿಯಾದ್ರೂ ಒಮ್ಮ ಬಂದು ಹೋಗಿ ....ಪ್ಲೀಸ್ .....
  

   
ಸಮುದ್ರ್ದದ ನಡುವಿನ ಯಾನ ..ಒಹ್...   

        ಬಿಸಿಲಲ್ಲಿ ಸಾಕಾದರೆ .. ನಿಮಗಿದೋ ನೆರಳಿನ ಆಸರೆ..       




ಸಂಗಮ,,,,,,,  ದ್ವೀಪ ದ ಆ ಕಡೆ ,,, ಸಮುದ್ರದ ಈ ಕಡೆ,  ನಾನೊಂದು ತೀರ ..ನೀನೊಂದು ತೀರ


ಜಲ....ನೆಲಗಳ  .....ಸಮಾಗಮ........

2 comments:

  1. ಭೂಗರ್ಭವಿಜ್ಞಾನಿಗಳ ಸ್ವರ್ಗವೆ೦ದು ಕರೆಯಲ್ಪಡುವ ಸ್ಥಳ ಸ೦ತ ಮೇರಿಯ ದ್ವೀಪ (Saint Mary's Island) . ಇ ಸ್ಥಳದಲ್ಲಿ ಬೆಸಾಲ್ಟ್ (Basalt)ಎ೦ಬ ಅಗ್ನಿಜನ್ಯ ಶಿಲೆ (Igneous-volcanic rock) ಸುಮಾರು ೬೦-೬೮ ಮಿಲಿಯನ್ ವರ್ಷಗಳ ಹಿ೦ದೆ ಸಿಡಿದ ಪ್ರತ್ಯಮ್ಲೀಯ ದ್ರವರೂಪಿ ಲಾವಾರಸ (Basic lava )ಹರಿದು ಸಮುದ್ರದ ನೀರ ಸ೦ಪರ್ಕ ಹೊ೦ದಿ, ತನ್ನ ಉಷ್ಣತೆ ಕಳೆದುಕೊ೦ಡು ತತಕ್ಷಣವೇ ಶಿಲಾರೂಪ ಪಡೆವಾಗ ಆದ ರೂಪವೇ -ಈ ಷಡ್ಭುಜಾಕೃತಿ ಕ೦ಬ ಶಿಲೆಗಳು (Columnar hexagonal structures). ತು೦ಬಾ ಅಪರೂಪದ ಬೆಳವಣಿಗೆ ಹೊ೦ದಿದ ಈ ಶಿಲೆಯ ಅಪಾರ ರಾಶಿಯನ್ನು ಒ೦ದೇ ಕಡೆ ನೋಡಲು ಈ ದ್ವೀಪದಲ್ಲಿ ಲಭ್ಯ.
    ತಾವು ಈ ದ್ವೀಪಕ್ಕೆ ಹೋಗುವ ವ್ಯವಸ್ಥೆ ಬಗ್ಗೆ ತಿಳಿಸಿದ್ದರೆ ತು೦ಬಾ ಅನುಕೂಲವಿತ್ತು.
    ಛಾಯಚಿತ್ರಗಳು ಸು೦ದರವಾಗಿದೆ.
    ದಿ.ಪುಟ್ಟಣ್ಣ ಕಣಗಾಲರು ಈ ದ್ವೀಪದಲ್ಲಿ ತಮ್ಮ "ಶುಭಮ೦ಗಳ" ಚಿತ್ರದ ನಾಲ್ಕೊ೦ದ್ಲೆ-ನಾಲ್ಕು ಹಾಡಿನ ಚಿತ್ರೀಕರಣ ನಟ ಶ್ರೀನಾಥರನ್ನು ಹಾಗೂ ನಟಿ ಆರತಿಯನ್ನು ಬಳಸಿ ಮಾಡಿದ್ದರು. ಆ ದೃಶ್ಯ ಮತ್ತು ಹಾಡು ಆಗಿನ ಕಾಲದ ಸುಪರ್ ಹಿಟ್ ಆಗಿತ್ತು.

    ಹಾಡಿಗಾಗಿ ಕ್ಲಿಕ್ಕಿಸಿ :
    http://www.youtube.com/watch?v=RW2zd0TNtAo&feature=PlayList&p=C4337C30F316D52E&index=83

    ReplyDelete
  2. ಬಸ್ಸಿನಲ್ಲಿ ಪ್ರಯಾಣ ಮಾಡುವವರಿಗೆ :



    ಉಡುಪಿಯ ಸಿಟಿ ಬಸ್ ಸ್ಟ್ಯಾಂಡ್ ನಿಂದ ಮಲ್ಪೆಗೆ ಹೋಗುವ ಬಸ್ ಹತ್ತಬೇಕು. ನಾವು ಇಳಿಯುವ ಸ್ಟಾಪಿನ ಹೆಸರು ಪೋರ್ಟ್. ಆ ಜಾಗಕ್ಕೆ ಟಿಕೆಟ್ ಮಾಡಿಸಿ. ಸುಮಾರು ೧೦-೧೫ ನಿಮಿಷದ ಒಳಗೆ ಆ ಸ್ಟಾಪ್ ಬಂದು ಬಿಡುತ್ತೆ..ಅಲ್ಲಿಂದ ಇಳಿದು ಒಂದು ೫ ನಿಮಿಷ ನಡೆಯೋಕೆ ಇದೆ...

    ನಂತರ ಅಲ್ಲಿ ಒಂದು ಕೌಂಟರ್ ಇದೆ ..ಅಲ್ಲಿ ನಮಗೆ ಸೈಂಟ್ ಮಾರಿಸ್ ದ್ವೀಪಕ್ಕೆ ಹೋಗುವ ಮಾಹಿತಿ ಮತ್ತೆ ಟಿಕೆಟ್ ಬುಕಿಂಗ್ ಮಾಡಿಸೋಕೆ ಇದೆ..ಅಲ್ಲೀ ನಮ್ಮನ್ನ ದ್ವೀಪಕ್ಕೆ ಕರೋದು ಕೊಂಡೋ ಹೋಗೋ ಶಿಪ್ ರೆಡಿ ಆಗಿರುತ್ತೆ..



    ಸುಮಾರ್ ೧೫ ನಿಮಿಷ ಸಮುದ್ರದಲ್ಲಿ ಸುಂದರ ಪಯಣ ..ಅಲ್ಲಿ ದ್ವೀಪ ಹತ್ತಿರ ವಾದ ಹಾಗೆ ಶಿಪ್ ಅಣ್ಣ ಚೇಂಜ್ ಮಾಡೋಕೆ ಇದೆ..



    ಇಷ್ಟೆಲ್ಲಾ ಆದಮೇಲೆ ನಿಮಗೆ ಸಿಗೋದೆ ಸೈಂಟ್.ಮ್ಯಾರಿಸ್ ಎಂಬ ಪುಟ್ಟ ದ್ವೀಪ.

    ReplyDelete