ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Powered By Blogger

Tuesday, July 6, 2010

ನಿ೦ತ ನೀರ ಕಲಕ ಬೇಡಿ ಕಲ್ಲುಗಳೇ ......







 ನನ್ನಷ್ಟಕ್ಕೆ ನಾನು ಹಾಯಾಗಿದ್ದೆ
ನನ್ನದೇ ಲೋಕದಲ್ಲಿ ನಡೆಯುತ್ತಿದ್ದೆ
ಕಷ್ಟಗಳ ಸರಮಾಲೇ ಎದುರಿಗಿದ್ದರು
ಕುಗ್ಗದೆ ಕೂಗದೆ ಮೆಲ್ಲ ಮಲ್ಲನೆ
ಹೆಜ್ಜೆ ಹಾಕುತಿದ್ದೆ




ನೀನೇಕೆ ಬಂದೆ ನನ್ನ ದಾರಿಯಲ್ಲಿ
ನಾ ಪಯಣಿಸುತ್ತಿದ ಆ ಹಾದಿಯಲಿ..
ಮನಸ್ಸಿನ ಭಾವನೆಗೆ ರೂಪ ಕೊಡುವ ನೆಪದಲ್ಲಿ
ಮನದೊಳಗೆ ಕುಳಿತುಬಿಟ್ಟೆ
ಹಾಡಾಗಿ ಹಾಡುತಿದ್ದೆ


ಬೇಡವಾಗಿತ್ತು ಲೋಕದ ಬವಣೆ,,,
ಸಾಕಾಗಿತ್ತು ನಿನ್ನ ಪ್ರೇರಣೆ,,,
ಜಗತ್ತೇ ಮರೆಯಾಗಿತ್ತು ಕೆಲವೊಮ್ಮೆ


ಬಾಯರಿದವರಿಗೆ ಸಿಗುವ
ಒಂದು ಹನಿ   ನೀರು ಜೀವಕೆ ಆಸರೆ...
ಮನಗಳೆದು ಬೆರೆತರೆ
ಭಾವನೆಗಳ ಅರಿತರೆ...
ಇನ್ನೇನು ಬೇಕು,,,
ಸ್ವರ್ಗವೇ ಸರಿ ಈ ಧರೆ,,,



ಆದರೆ ವಿಧಿ ಲಿಖಿತ ಬೇರೆ
ಎಣಿಸಿದ್ದೆ ಬೇರೆ ಆಗಿದ್ದೆ ಬೇರೆ..
ಕೊನೆತನಕ ಬೇಕಿದ್ದ ನಿನ್ನ ಆ ಸೆರೆ..
ಕಡೆಗೆ  ನನ್ನಿ೦ದ  ಆಯಿತು ಬೇರೆ..


ಕುಹಕಿಗಳ ಮಾತಿಗೆ ಬೆಲೆ ..
ಭಾವನೆಗಳಿಗೆ ಅಲ್ಲ.
ದೂರವಾಗುವ ಮುನ್ನ ಹತ್ತಿರ
ಬರಬಾರದಿತ್ತು,,, 
ಹತ್ತಿರವಾಗಿ ದೂರ ಹೋಗಬಾರದಿತ್ತು ,,,


5 comments:

  1. ಭಾವನೆಗಳ ಚೆಂದದ ಅಭಿವ್ಯಕ್ತಿ.

    ReplyDelete
  2. ಭಾವನೆಗಳನ್ನು ವ್ಯಕ್ತಪಡಿಸುವ ಕವನ ಮನಮುಟ್ಟುವಂತಿದೆ.
    ಸುಂದರ ಕವನ..........

    ReplyDelete
  3. ಧನ್ಯವಾದಗಳು ..ಸರ್...

    ReplyDelete
  4. u r most welcome for the comments...

    ReplyDelete