Loading...

ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Tuesday, February 9, 2010

ನನ್ನ ಪ್ರೀತಿಯ ಬಾಲ್ಯವೇ.. ಮತ್ತೊಮ್ಮೆ ಮರಳಿ ಬಾ

ಆ ದಿನಗಳು ..ಅದೇ ಬಾಲ್ಯದ ದಿನಗಳು..ಎಷ್ಟು ಚೆನ್ನಾಗಿತ್ತು. ಮಾತ್ರ ಅದು ಈಗ ನವಿ ನೆನಪು ಮಾತ್ರ...
ಆಗ ಮನಸ್ಸು ಕೂಡ ಎಷ್ಟು ಮುಗ್ಧವಾಗಿರುತ್ತೆ  ಅಲ್ವ...ಏನು ಗೊತ್ತೇ ಇರುವುದಿಲ್ಲ..
ಕಷ್ಟ ನೋ  ಸುಖ ನೋ , ಪ್ರೀತಿ ಅಥವಾ ದ್ವೇಷ  ..ಇದರ  ಅರ್ಥವೇ ಗೊತ್ತಿರದಷ್ಟು ಮುದ್ದಾಗಿತ್ತು ಆ ಬಾಲ್ಯ...
ಸಿಟ್ಟು ಬಂದರೆ ಕೋಪ ಹಾಕುವುಧು ಒಂದೇ ಗೊತ್ತಿದ್ದದ್ದು..

ಮನೆಯಲ್ಲಿ  ಆಡುತಿದ್ದ ಆ ಕಣ್ಣು ಮುಚ್ಚಾಲೆ ಆಟ, ಜೂಟಾಟ ಏನು ಚಂದ ಇತ್ತು...ಬೇಸಿಗೆ ರಜಾ ದಿನದಲ್ಲಿ ಮಾವಿನ ಮರದ ಹಣ್ಣು ಹೆಕ್ಕಲು  ಪೈಪೋಟಿ .ಗೆಳೆಯ ,ಗೆಳತಿಯರ ಜೊತೆಗಿನ ಆ ದಿನ ...ಮತ್ತೆ ಮತ್ತೆ ನೆನಪು ಬರುತಿದೆ...

ನನಗೆ ಇನ್ನು ನೆನಪಿದೆ ಆ ಹಾಸ್ಯ ಪ್ರಸಂಗ...
ಶಾಲೆಗೆ ಹೋಗುವಾಗ ಬರುವಾಗ ನಮ್ಮದೇ  ಒಂದು ದೊಡ್ಡ ಗುಂಪು....ಒಟ್ಟು ಎಂಟು ಜನ ಹುಡುಗಿಯರು ಆರು ಜನ ಹುಡುಗರು.. ಮನೆಯಿಂದ ಸುಮಾರು ಮುಕ್ಕಾಲು ಗಂಟೆ  ದಾರಿ ಶಾಲೆಗೆ... ಹೋಗುವಾಗ ಸಾಕಿತ್ತು ...
ಆದರೆ ದಾರಿಯ ಮಧ್ಯೆ  ಒಂದು ದೊಡ್ಡ ಗದ್ದೆ ..ಅದೂ ಕಬ್ಬಿನ  ಗದ್ದೆ... ಗದ್ದೆಯಲ್ಲಿ ಹೋಗಲಿಕ್ಕೆ  ಇಲ್ಲ ಗದ್ದೆ ನಡುವೆ ಒಂದು  ದಾರಿ ಮಾಡಿದ್ರು.. ಅದರಲ್ಲಿ ನಮ್ಮ ದಿನ ನಿತ್ಯದ ಪಯಣ ..
ಹೀಗಿರಬೇಕಾದ್ರೆ ಗದ್ದೆಯಲ್ಲಿನ ಕಬ್ಬು  ಬೆಳೀತಾ ಬಂತು..ನಮಗೆಲ್ಲ ಅದರ ಮೇಲೆ ಕಣ್ಣು .. ಆ ಕಬ್ಬಿನ  ಒಡೆಯರ ಮನೆ ಗದ್ದೆಗಿ೦ತ ಸ್ವಲ್ಪ   ದೂರ ಇತ್ತು..ನಮೆಗೆಲ್ಲ ಆ ಕಬ್ಬಿನ ಮೇಲೆ ಕಣ್ಣು,,  ನಮ್ಮೆ ಗೆಳೆಯರು ಓ೦ದು  ದಿನ ಗಟ್ಟಿ ಮನಸು ಮಾಡಿಯೇ ಬಿಟ್ಟರು..ಶಾಲೆ ಬಿಟ್ಟು ಹಿ೦ದೆ ಬರುವಾಗ ಮೆಲ್ಲನೆ ಆ ಗದ್ದೆಯ ಒಳಗೆ ತೂರಿಕೊಂಡು  ಕಬ್ಬನ್ನು ಮೆಲ್ಲಗೆ ತು೦ಡು ಮಾಡಿ ತರಲು ಶುರು ಮಾಡಿದರು ..ದಿನಾ ಇದೇ ತರ  ಮುಂದುವರಿಯುತ್ತಿತ್ತು..ಕಬ್ಬನ್ನು ತಿ೦ದು ರಸವನ್ನ ಹೀರಿ ..ದಾರಿ ಸವೆಸುವ ಆ ಪರಿ ಗಮ್ಮತ್ತೆ ಗಮ್ಮತ್ತು..

ಆದರೆ ಒಂದು ದಿನ ಮಾತ್ರ ಆ ಗದ್ದೆಯ ಒಡೆಯರ ಕೈಯಲ್ಲಿ ಸಿಕ್ಕಿ ಬೀಳುವ ಪಜೀತಿ ನಮ್ಮ ಗೆಳೆಯರದಾಯಿತು...ಗದ್ದೆಯ ನಡು ಭಾಗ ಖಾಲಿ ಖಾಲಿ ಯಾದಾಗ ಅವರಿಗೆ ಹೇಗೆ ಅನಿಸಿರಬಹುದು...ಅಯ್ಯೋ ಪಾಪ..ನಾವು ಬರುವ ಹೊತ್ತಲ್ಲಿ ಕಾದು ಕೂತಿದ್ದರು ಅನಿಸುತ್ತೆ,,,ನಮಗೆ ನಮ್ಮ ಗೆಳೆಯರಿಗೆ ಅದರ ಪರಿವೆ ಇರಲಿಲ್ಲ..ಅವರು ದಿನ ನಿತ್ಯದಂತೆ  ಗದ್ದೆಯ ಒಳಗೆ ತೋರಿ ಕಬ್ಬು ತು೦ಡು ಮಾಡಲು ಸುರು ಮಾಡುತ್ತಿದ್ದಂತೆ ಈ ಕಡೆಯಿ೦ದ ಬೆನ್ನಿಗೆ ಬೀಳಲು ಸುರುವಾಗಿತ್ತು..ನಾವೆಲ್ಲ ಹೆದರಿ ಚೆಲ್ಲಾಪಿಲ್ಲಿ.. ಕಬ್ಬಿನ ರುಚಿಯೊ೦ದಿಗೆ ಪೆಟ್ಟಿನ ರುಚಿಯು ಸೇರಿ ಒಳ್ಳೆಯ ಕಬ್ಬಿನ ಪಾನಕ ಕುಡಿದ ಹಾಗಿತ್ತು..ಮತ್ತೆ  ಒಂದು ವಾರ ನಮ ದಾರಿಯೇ ಬದಲಾಯಿತು... ಆದರೂ ಆ ನೆನಪು ಮಾತ್ರ ಕಬ್ಬಿನ ರಸದಂತೆ ಇನು ಸಿಹಿಯಾಗಿಯೇ ಉಳಿದಿದೆ..
                      ಇನ್ನೊ೦ದು ಕ್ಲಾಸಿನಲ್ಲಿ ನಡೆದ ಹಾಸ್ಯ ಪ್ರಸ೦ಗ.  ಎಂಟನೆ ಕ್ಲಾಸಿನಲ್ಲಿ ಇರಬೇಕಾದ್ರೆ ..ಬೆಳಗ್ಗಿನ ನಾಲ್ಕನೇ ಪೀರಿಯಡ್ ಫ್ರೀ ಇತ್ತು.   ನಾವು ನಾಕು ಜನ ಗೆಳತಿಯರು ಊಟ ಮುಗಿಸಿ ಏನು ಮಾಡುವುದು  ಎ೦ದು ಯೋಚಿಸುತ್ತಿರಬೇಕಾದರೆ ಒಬ್ಬಳು ಹಾಡು ಹೇಳೋಣಾ ಎ೦ದ ಳು . ಕ್ಲಾಸಿನಲ್ಲಿ ನಮ್ಮನ್ನು ಬಿಟ್ಟರೆ ಉಳಿದವರೆಲರು ಲೈಬ್ರರಿ ಗೆ  , ಅಲ್ಲ್ಲಿಗೆ  ಇಲ್ಲಿಗೆ ಅಂತ ಹೊರಗೆ ಹೋಗಿದ್ದರು.. ಸುರುವಾಯಿತು ನಮ್ಮ ಹಾಡಿನ ಸರಮಾಲೆ..
ಆ ಕಡೆಯಿಂದ ಈ     ಕಡೆಯಿಂದ ಬೇರೆ ಕ್ಲಾಸ್ ನಡೆಯೋ ದನ್ನ ಮರೆತು ನಮ್ಮ ಸ್ವರ ಜೋರಾಗಿ ತಾರಕಕ್ಕೆ ಏರಿತ್ತು,, 

ಆಛೆ ಕ್ಲಾಸಿನ ಸರ್ ಕೈಯಲಿ ಬೆತ್ತ ಹಿಡಿಧು ನಮ್ಮ ಕ್ಲಾಸಿಗೆ ಬ೦ದಾಗಲೆ ನಮ್ಮ ಸ್ವಾ ಅಲ್ಲೇ ಗುಂ.   ನನ್ನ ಸವರಣೆ ಜಾಸ್ತಿ ಪಿಚ್ನಲ್ಲಿ ಇತ್ತು ..ಅದನ್ನೇ ನೆಪ ಮಾಡಿಕೊಂಡು ನನ್ನನ್ನ ಮಾತ್ರ ಅವರ ಕ್ಲಾಸಿಗೆ ಕರೆದು ಕೊ೦ಡು ಹೋಗಿ ಒಂದು ಹಾಡು ಹಾಡಲಿಕ್ಕೆ ಹೇಳಿದ್ರು... ನಾ ಎಷ್ಟು ಒಲ್ಲೆನೆ೦ದರೂ  ಬಿಡದೆ ಬೆತ್ತ ತೋರಿಸಿ ಮತ್ತೆ ಮತ್ತೆ ಒತ್ತಾಯ ಮಾಡಿ ಹಾಡಿಸಿಯೇ ಬಿಟ್ಟರು..  ನನಗೆ ಮಾತ್ರ ಆ ಹಾಡು , ಆ ಪ್ರಸ೦ಗ ಇನ್ನು ಹಾಗೆ ಹಸಿರಾಗಿ ಮನದಲ್ಲಿಯೇ ಉಳಿದು ಬಿಟ್ಟಿದೆ.........ನನ್ನ ಹೆಸರನ್ನು ಯಸ್..ಜಾನಕಿ ಅ೦ತ ನಾಮಕರಣ ಮಾಡಿಬಿಟ್ರು..ಇಂದಿಗೂ ಆ ಸರ್  ಎಲ್ಲಾದರು ಸಿಕ್ಕಿದೆ ನನ್ನ ಕರೆಯೋದು ಅದೇ ಹೆಸರಿ೦ದ..ಇನ್ನು ಎಷ್ಟೋ  ಪ್ರಸ೦ಗ ಗಳು  ಇವೆ ಮರೆಯಲಾಗದು.... ಹೇಳಲಾಗದ್ದು .

ಆ ಬಾಲ್ಯದ ಸಿಹಿ ನೆನಪು ಮತ್ತೆ ಮತ್ತೆ ಬರುತ್ತಾ ಮುದುಡಿದ ಈ ಮನವನ್ನ  ಅರಳಿಸುತ್ತಲೇ ಇರುತ್ತದೆ............ಓ ಬಾಲ್ಯವೇ ಮತ್ತೊಮ್ಮೆ ಬಾ ಮರಳಿ...           ಕಾದಿರುವೆ ನಿನಗಾಗಿ ................

1 comment:

  1. ತಮ್ಮ ಬಾಲ್ಯದ ನೆನಪುಗಳನ್ನು ಹೇಳುತ್ತಾ ನಮ್ಮ ಬಾಲ್ಯದ ನೆನಪು ಕೆಣಕಿದ್ದಿರಾ... ಬಾಲ್ಯದ ಮಧುರ ನೆನಪು ಬ೦ದಾಗಲೆಲ್ಲಾ ಅನಿಸುವದು.... ಎ೦ಥದಿತ್ತು ಆ ದಿನಾ ... ಚೆಲ್ಲಿ ಹೋದ ಚೇತನ... ಅ೦ದು ನಾವು ಎಳೆಯರು....
    NICE ARTICLe

    ReplyDelete