Loading...

ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Monday, February 1, 2010

ಒಮ್ಮೊಮ್ಮೆ ಒಂದು ಥರ
ಯಾಕೋ ಏನೋ ಗೊತ್ತಿಲ್ಲ ..ಒಮ್ಮೊಮ್ಮೆ ಜಗತ್ತಿನ ಎಲ್ಲ ಸಂತಸ ..ನಗು ..ಉಲ್ಲಾಸ ಎಲ್ಲ ನನ್ನಲ್ಲಿಯೇ ಇದೆ ಅನಿಸುತ್ತೆ...

ಆದರೆ ಮತ್ತೊಮ್ಮೆ ಎಲ್ಲ ಖಾಲಿ ಖಾಲಿ ...ಶೂನ್ಯವಾಗಿ ಬಿಡುತ್ತೆ,,
ನಾನು ಯಾಕೆ ಹೀಗಾದೆ .ನನಗೆ ಗೊತ್ತಿಲ್ಲ ..ಅಲ್ಲ ನಾನು ಹೀಗೆ ಇರಲ್ಲಿಲ್ಲ..ಆದರು ಯಾಕೆ ಹೀಗಾದೆ ?ಮೊದಲು ನಾನು ಹೇಳಿದ್ದೆಲ್ಲ ನನಗೆ ಸಿಗಬೇಕು.ಹಾಗಿದ್ದೆ .. ಆದರೆ ಈಗ .... ಮನದಲ್ಲಿನ ಭಾವನೆಗಳನ್ನು ವ್ಯಕ್ತ ಪಡಿಸಲು ಸ್ವಾತಂತ್ರ ಇಲ್ಲದಷ್ಟು ಸ್ಥಿತಿಗೆ ಬಂದಿದ್ದೇನೆ ಅ೦ದ್ರೆ ಇದು ಯಾರ ತಪ್ಪು...


ಈಗಲೂ ಮೆಲುಕು ಹಾಕುತ್ತೇನೆ ಆ ದಿನಗಳನ್ನ .. ಹಕ್ಕಿಯಂತೆ ಹಾರುತಿದ್ದ ಆ ಕ್ಷಣಗಳನ್ನ .....ಆದರೆ ಈಗ ಈ ಬಂಧನ ..


ಕಷ್ಟ ಅ೦ದರೆ ಏನು ಅಂತ ಗೊತ್ತಿಲ್ಲ.. ಬೇಸರ ಅನ್ನೋದು ಇಲ್ಲವೇ ಇಲ್ಲ... ಸದಾ ಖುಷಿಯಾಗಿ , ನಗು ನಗುತ್ತ ಇದ್ದ ಆ ದಿನಗಳು ಮತ್ತೆ ಖಂಡಿತ ಬರುವುದಿಲ್ಲ ಎಂಬ ಸತ್ಯ ಗೊತ್ತಿದ್ದರೂ ಅದನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಂಡು ಕುಶಿ ಪಡುವ ಸಿಹಿ ನೆನಪು ಎಷ್ಟು ಚಂದ ಅಲ್ವ...ಆ ನೆನಪೇ ತಂಪಾದ ಗಾಳಿಯಾಗಿ ...ಇಂಪಾದ ಹಾಡಾಗಿ ...ನನ್ನ ಮನದಲ್ಲಿ ಆಗಾಗ ಮೂಡಿ ಮರೆಯಾಗಿ ನೋವನ್ನ ಒಮ್ಮೊಮ್ಮೆ


ಇನ್ನೊಮ್ಮೆ ನಲಿವನ್ನ ಮನಸಿನ್ನ ಜೊತೆ ಆಡಿ ಆಡಿ ಓಡಿ ಹೋಗುತ್ತೆ .........


ಯಾವಾಗಲು ಎನಿಸೋದು ..ಇನ್ನು ಗಟ್ಟಿ ಮನಸು ಮಾಡ್ಕೊಂಡು ಇರ್ಬೇಕು  ಅಂತ ,,,ಆದ್ರೆ ಸಣ್ಣ ಪುಟ್ಟ ವಿಷಯಕ್ಕೆಲ್ಲ ಮತ್ತೆ ನೊಂದು ಕೊಳ್ಳೋದು ..ಇದೆ ಆಯಿತು,,

ಈ ಮನಸು ತುಂಬಾನೆ ವೀಕ್ ಕಣ್ರೀ...ಏನು ದಮ್ಮೆ ಇಲ್ಲ..

ಕೆಲವರು ಎಷ್ಟು ಕಡಕ್ ಇರ್ತಾರಲ್ವ..   ನಿಜವಾಗಿಯೂ ಅವರು ಗ್ರೇಟ್ ,,,,,

ನಾನು ಮಾತ್ರ ಎಷ್ಟು ಪ್ರಯತ್ನ ಪಟ್ರೂ ಯಾಕೆ ಆಗಲ್ಲ ..

ಈ ಪ್ರಪ೦ಚದಲ್ಲಿ  ಮೆ೦ಟಲಿ ಸ್ತ್ರಾ೦ಗ್ ಆಗಿ ಇದ್ರೆ ಮಾತ್ರ ನಾವು ಇರೋಕಾಗೋದು.. ಈ ಸೆ೦ಟಿಮೆ೦ಟಲ್ ಮನಸನ್ನ ಇಟ್ಕೊ೦ಡ್ರೆ ಕಷ್ಟ ಬಾರಿ ಕಷ್ಟ ..

ಬೇಸರ ಆದಾಗ ಅತೀಯಾಗಿ  ಬೇಸರ ಪಡೋದು ,  ಕುಶಿಯಾದಾಗ ತುಂಬಾ ಕುಶೀ ಪಡೋದು , ಕಷ್ಟ ಬಂದಾಗ  ಆಕಾಶನೆ ತಲೆ ಮೇಲೆ ಬಿದ್ದ ಹಾಗೆ ಮಾಡೋದು...ಎಲ್ಲ ಬಿಟ್ಟು ಬಿಡಬೇಕು..  ಕಷ್ಟ ಮನುಷ್ಯನಿಗೆ ಬರದೆ ಮತ್ತೆ ಮರಕ್ಕ ಬರೋದು..

ಸಮರಸವೇ ಜೀವನ..........ಕಷ್ಟ ಸುಖ ಎರಡನ್ನು  ಸಮವಾಗಿ ಹ೦ಚಿಕೊ೦ಡು ಬದುಕನ್ನ ಹಸನಾಗಿಸುವ ಪ್ರಯತ್ನ ನನ್ನದು .ಮನಸ್ಸು
ಹಸಿರಾಗಿರಬೇಕು.. ಆಗಲೇ ನಾವು ಕುಶಿಯಾಗಿರೋಲೆ ಸಾದ್ಯ,,,

ನಿಮ್ಮ ಅನಿಸಿಕೆ ಏನು ಹೇಳ್ತೀರಾ ,,,,,,ಪ್ಲೀಸ್ ...
 

3 comments:

 1. ಬೇರೆಯವರು ನಮ್ಮನ್ನು ಸ೦ತೋಷಪಡಿಸಬೇಕು ಎ೦ದುಕೊ೦ಡರೇ ನಿರಾಶೆ ಕಟ್ಟಿಟ್ಟದ್ದೆ. ನಮ್ಮ ಸ೦ತೋಷ ನಮ್ಮ ಕೈಯಲ್ಲೆ ಇದೆ. ಮನಸ್ಸು ಓಡಾಡೋ ಪರಿಯು ಅಷ್ಟೇ... ಆಕಾಶ ಏರಿಸುತ್ತೆ... ಎಳೆದು ಒಗೆಯುತ್ತೇ... ಹುಚ್ಚುಮನಸ್ಸಿಗೇ ಕಡಿವಾಣ ಕಷ್ಟ.
  ಕೆಲವು ಉಪಾಯಗಳಿವೆ ಪಾರಾಗಲು.

  ReplyDelete
 2. yen sir upaaya
  namagU heLi pls..

  ReplyDelete
 3. thanku sir..thank you so much..

  ReplyDelete